ಆಸಕ್ತಿಯ ಸ್ಥಳಗಳು

ಬೆಂಗಳೂರು ಅರಮನೆಯು, ಕರ್ನಾಟಕದ ‘ಎಲೆಕ್ಟ್ರಾನಿಕ್ ನಗರ ‘  ಎಂದು ಕರೆಯಲ್ಪಡುವ ಬೆಂಗಳೂರು ಮಧ್ಯದಲ್ಲಿದೆ. ಸದಾಶಿವನಗರ ಮತ್ತು ಜಯಮಾಹಲ್ ನಡುವೆ ಈ ಅರಮನೆ ಇದೆ. ಸುಂದರ ತೋಟಗಳಿಂದ ಆವೃತವಾಗಿರುವ ಈ ಅರಮನೆಯು ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಅಲ್ಲದೆ, ಇದು ಪ್ರಮುಖ ಘಟನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆಯ ತಾಣವಾಗಿದೆ. ಅರಮನೆಯ ಮರದ ರಚನೆ, ವಿವಿಧ ವಾಸ್ತುಶಿಲ್ಪದ ಶೈಲಿಗಳನ್ನು ಚಿತ್ರಿಸುವ ಒಳ ಮತ್ತು ಹೊರಭಾಗದ ಭವ್ಯವಾದ ಕೆತ್ತನೆಗಳಿಂದ ಇದು ಪ್ರತಿನಿಧಿಸುತ್ತದೆ ಮತ್ತು ರಾಯಲ್ ಸಂಸ್ಕೃತಿಯನ್ನು ನೆನಪಿಸುತ್ತದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮದುವೆಯ ಸಮಾರಂಭ, ಪ್ರದರ್ಶನಗಳು, ಸಂಗೀತ ಕಚೇರಿಗಳು, ಕ್ರೀಡಾ ಘಟನೆಗಳು ಮುಂತಾದ ಸಾಮಾಜಿಕ ಕಾರ್ಯಗಳನ್ನು ಕಳೆದ ಕೆಲವು ವರ್ಷಗಳಿಂದ ಅರಮನೆಯ ಮೈದಾನದಲ್ಲಿ ನಡೆಸಲಾಗುತ್ತದೆ.
ಅರಮನೆಯ ಸಂಕೀರ್ಣದಲ್ಲಿ ಫನ್ ವರ್ಲ್ಡ್ ಎಂದು ಕರೆಯಲಾಗುವ ಮನೋರಂಜನಾ ಉದ್ಯಾನವಿದೆ. ಒಂದು ಗಂಟೆ ಅವಧಿಯ ಆಡಿಯೋ ಪ್ರವಾಸ ಏಳು ಭಾಷೆಗಳಲ್ಲಿ ಲಭ್ಯವಿದೆ: ಇಂಗ್ಲೀಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್, ಹಿಂದಿ ಮತ್ತು ಕನ್ನಡ.

ಟಿಪ್ಪುವಿನ ಅರಮನೆ ಈ ಪ್ಯಾಲೇಸ್‌ ಬೆಂಗಳೂರು ಕೋಟೆಯ ಆವರಣದಲ್ಲಿ 1781ರಲ್ಲಿ ನವಾಬ್‌ ಹೈದರ್‌ ಖಾನ್‌ನ ಕಾಲದಲ್ಲಿ ಪ್ರಾರಂಭಗೊಂಡು 1791 ರಲ್ಲಿ ಟಿಪ್ಪು ಸುಲ್ತಾನ್‌ನ ಕಾಲದಲ್ಲಿ ಪೂರ್ಣಗೊಂಡ ಈ ಅರಮನೆ ಮರ ಹಾಗೂ ಗಾರೆಕಚ್ಚಿನಿಂದ ನಿರ್ಮಾಣವಾಗಿದೆ. ಎರಡಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂಡೋ ಇಸ್ಲಾಮಿಕ್‌ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಲ್ಲಿನ ಪೀಠಗಳ ಮೇಲೆ ಮರದ ಕಂಬಗಳನ್ನು ಅಳವಡಿಸಲಾಗಿದ್ದು ಈ ಕಂಬಗಳ ನಡುವೆ ಇರುವ ಇಂಡೋ-ಇಸ್ಲಾಮಿಕ್‌ ಶೈಲಿಯ ಕಮಾನುಗಳು ಮನಸೂರೆಗೊಳ್ಳುತ್ತವೆ. ಹಾಗೂ ಇಡೀ ಮೊಗಸಾಲೆಗೆ ಮತ್ತಷ್ಟು ಮೆರುಗು ನೀಡಿವೆ. ಅರಮನೆಯ ಗೋಡೆಗಳು ವರ್ಣಚಿತ್ರಗಳಿಂದ ಆವೃತವಾಗಿದ್ದು ನೋಡಲು ಮನೋಹರವಾಗಿವೆ. ಮೇಲಂತಸ್ತಿಗೆ ಹೋಗಲು ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪಾವಟಿಕೆಗಳಿವೆ. ಸುಲ್ತಾನರು ನಡೆಸುತ್ತಿದ್ದ ದೈನಂದಿನ ದರ್ಬಾರದ ಕೋಣೆಯನ್ನು ನೋಡಬಹುದು. ಜೊತೆಗೆ ಅವರು ಬಳಸುತ್ತಿದ್ದ ಕತ್ತಿ, ಖಡ್ಗಗಳನ್ನೂ ಕಾಣಬಹುದಾಗಿದೆ.ಅರಮನೆಯ ಗೋಡೆಗೆ ಹೊಂದಿಕೊಂಡಿರುವ ಶಾಸನವೊಂದರಲ್ಲಿ ಈ ಅರಮನೆಯನ್ನು “ಸಂತೋಷದ ಆವಾಸ ಹಾಗೂ ಸ್ವರ್ಗದ ವೈರಿ’ ಎಂದು ಬಣ್ಣಿಸಲಾಗಿದೆ.

ದೊಡ್ಡ ಆಲದ ಮರ ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ . ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ 3 ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ. 400 ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ.ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ.ಆಲದ ಮರದ ಎತ್ತರ 95 ಅಡಿ. ಕೊಂಬೆಗಳು. ದೈತ್ಯ ಮರ ನಾಲ್ಕು 3 ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ. . 20000ರಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ . ಸಂರಕ್ಷಣೆಯ ಹೊಣೆ:ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಆಲದ ಮರದ ಸಂರಕ್ಷಣೆಯ ಹೊಣೆ ವಹಿಸಿಕೊಂಡಿದೆ. ನಾಲ್ಕು ಎಕರೆ ಪ್ರದೇಶಕ್ಕೆ ಸುತ್ತ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆ. ಕೇಂದ್ರ ಸರ್ಕಾರಕ್ಕೂ ಪ್ರದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ.ಕುಡಿಯುವ ನೀರಿನ ವ್ಯವಸ್ಥೆಯಿದೆ. ಕೋತಿಗಳ ಕಾಟ ಜೋರಾಗಿ ಇದೆ. 

ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸಿಂಹಗಳ ಘರ್ಜನೆ ಕೇಳುವುದರೊಂದಿಗೆ ಇತರ ಪ್ರಾಣಿಗಳನ್ನೂ ನೋಡುವ ಸೌಭಾಗ್ಯ ಸಫಾರಿ ಮಾಡುವ ಪ್ರವಾಸಿಗರಿಗೆ ಇಲ್ಲಿ ಸಿಗುವುದು.  25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನ. 7.5 ಎಕರೆ ವಿಸ್ತೀರ್ಣದಲ್ಲಿ ವಿಶೇಷವೆನ್ನಿಸುವ ಈ ಚಿಟ್ಟೆ ಉದ್ಯಾನವನವನ್ನು ಕೇಂದ್ರ ಸಚಿವ ಕಪಿಲ ಸಿಬಲ್ 2006 ರಲ್ಲಿ ಉದ್ಘಾಟಿಸಿದ್ದಾರೆ. ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.