Close

ಕನ್ನಡ ಮತ್ತು ಸಂಸ್ಕೃತಿ

ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ

ಬೆಂಗಳೂರು ನಗರ ಜಿಲ್ಲೆಯಿಂದ ಏರ್ಪಡಿಸುವ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕರ್ನಾಟಕದ ಭವ್ಯ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಲಲಿತಕಲೆ ಮತ್ತು ಜಾನಪದ ಕಲಾಪ್ರಕಾರಗಳ ಪುರೋಭಿವೃದ್ಧಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಮುಂದಿನ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ.

ಚಿಗುರು-ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಉದಯೋನ್ಮುಖ ಹಾಗೂ ಪ್ರತಿಭಾವಂತ ಮಕ್ಕಳಿಂದ ವಿವಿಧ ರೀತಿಯ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಸಾಂಸ್ಕೃತಿಕ ಸೌರಭ – ರಾಜ್ಯದ ಹಿರಿಯ ಸಾಹಿತಿ/ಕಲಾವಿದರಿಂದ ಶಾಲಾ/ಕಾಲೇಜುಗಳಲ್ಲಿ ಒಂದು ದಿನ ಉತ್ಸವ ರೂಪದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಈ ಯೋಜನೆಯನ್ನು ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಯುವ ಸೌರಭ – ಯುವಸೌರಭ ಕಾರ್ಯಕ್ರಮವು ನಾಡಿನ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆ. ಈ ಕಾರ್ಯಕ್ರಮದ ಮೂಲಕ ನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಯುವ ಪ್ರತಿಭಾವಂತ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.  

ಜನಪರ ಉತ್ಸವ – ನಾಡಿನಲ್ಲಿ ವಾಸವಾಗಿರುವ ಶೋಷಿತ, ದಮನಿತ, ನಿರ್ಲಕ್ಷಿತ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಸರ್ಕಾರವು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ(ಎಸ್.ಸಿ) ಸಾಹಿತಿ/ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಲು ಜನಪರ ಉತ್ಸವವನ್ನು 30 ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. (ವಿಶೇಷ ಘಟಕ ಯೋಜನೆ)

ಗಿರಿಜನೋತ್ಸವ (ಗಿರಿಜನ ಉಪಯೋಜನೆ) – ನಾಡಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಗಿರಿಜನ ಸಮುದಾಯವನ್ನು ವಿಶೇಷವಾಗಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಸರ್ಕಾರವು ಗಿರಿಜನ ಉಪಯೋಜನೆಯಡಿ ವಿಶೇಷ ನಿಧಿಯನ್ನು ಸ್ಥಾಪಿಸಿ, ಪ್ರತ್ಯೇಕ ಅನುದಾನವನ್ನು ಮಂಜೂರು ಮಾಡಿ, ಪರಿಶಿಷ್ಟ ಪಂಗಡದ(ಎಸ್.ಟಿ) ಕಲಾವಿದರು/ಸಾಹಿತಿಗಳು ತಮ್ಮ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಗಿರಿಜನೋತ್ಸವವನ್ನು ಆಚರಿಸಲಾಗುತ್ತಿದೆ.

ಜಿಲ್ಲಾ ಕವಿಗೋಷ್ಠಿ – ಆಯಾ ಜಿಲ್ಲೆಯಲ್ಲಿನ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರೊಂದಿಗೆ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಲಾಗುತ್ತಿದೆ.  

ಸಾಧಕರೊಂದಿಗೆ ಸಂವಾದ – ವಿಶಿಷ್ಟ ಸಾಧನಗೈದಿರುವ ಸಾಧಕರನ್ನು ಗುರುತಿಸಿ ಅವರ ಅನುಭವ, ಅನಿಸಿಕೆಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅವರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ.

ಸುಗ್ಗಿ-ಹುಗ್ಗಿ – ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಮಯದಲ್ಲಿ ರೈತಾಪಿ ಜನರನ್ನು ಸಾಂಸ್ಕತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದಿಂದ ರೈತರೇ ಬೆಳೆದ ಬೆಳೆಗಳನ್ನು ರಾಶಿಗೆ ಹಾಕುವ ಹೊತ್ತು ಹಾಗು ನೇಸರನು ಮಕರರಾಶಿಯನ್ನು ಸೇರುವ ದಿನ ಮತ್ತು ಅಂದು ನಡೆಸುವ ಹಬ್ಬಕ್ಕೆ ಸಂಕ್ರಾಂತಿ ಎಂದು ಹೆಸರು. ಆ ದಿನದಂದು ರೈತರೊಂದಿಗೆ ಸುಗ್ಗಿಹುಗ್ಗಿ ಕಾರ್ಯಕ್ರಮವನ್ನು ಹಬ್ಬವಾಗಿ ಜಿಲ್ಲಾಮಟ್ಟಗಳಲ್ಲಿ ಆಚರಿಸಲಾಗುವುದು.