Close

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಇಲಾಖೆಯ ಬಗ್ಗೆ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಇಲಾಖೆಯು ಮಹಿಳೆಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಸಮಗ್ರವಾಗಿ ಮುಖ್ಯವಾಹಿನಿಗೆ ತರುವ ಮೂಲ ಉದ್ದೇಶವನ್ನು ಹೊಂದಿದೆ. ಮಹಿಳೆಯರ ಅಭಿವೃದ್ಧಿ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವುದಾಗಿ ಕಾರ್ಯಕ್ರಮಗಳು ಮಹಿಳೆಯರಿಗೆ ಶಿಕ್ಷಣ, ಅರಿವು ಮೂಡಿಸುವ ಮೂಲಕ ಸಶಕ್ತರನ್ನಾಗಿ ಮಾಡುವುದು ಅದರಲ್ಲೂ ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆ ಒತ್ತುಕೊಡುವ ಮೂಲಕ ಮಹಿಳೆಯರಲ್ಲಿ ದುಡಿಮೆಯ ಶಕ್ತಿ ಮತ್ತು ಜೀವನಮಟ್ಟವನ್ನು ಹೆಚ್ಚಿಸುವುದು.

ಇಲಾಖೆಯು ಮಕ್ಕಳಿಗೆ ಅವರ ಮೂಲಭೂತ ಹಕ್ಕುಗಳಾದ ಉಳಿಯುವಿಕೆ, ರಕ್ಷಣೆ ಅಭಿವೃದ್ಧಿ ಹಾಗೂ ಸಂರ್ಪೂಣ ಭಾಗಿತ್ವವನ್ನು ಖಾತರಿಪಡಿಸುವಂತಹ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಕ್ಕಳು ಅವರ ವೈಯಕ್ತಿಕ ಬೆಳವಣಿಗೆ ಹಾಗೂ ಉತ್ತಮಜೀವನಕ್ಕೆ ಅವಶ್ಯವಾದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಇತರೆ ಆಯಾಮಗಳಲ್ಲಿ ಸಂರ್ಪೂಣವಾಗಿ ಭಾಗವಹಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆ ಮತ್ತು ಮಕ್ಕಳಿಗಾಗಿ ಜಾರಿಯಲ್ಲಿರುವ ಅನೇಕ ಯೋಜನೆ/ಸೇವೆಗಳನ್ನು ಒಗ್ಗೂಡಿಸಿ ನೀಡುವ ವ್ಯವಸ್ಥೆಯನ್ನು ಉತ್ತಮ ಪಡಿಸುವಲ್ಲಿ ಹೆಚ್ಚು ಒತ್ತುಕೊಡುತ್ತಿದೆ.

ಗುರಿ:

ರಾಜ್ಯದ ಮಹಿಳೆಯರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಿಷ್ಠರಾಗಲು ಮತ್ತು ರಾಜ್ಯದ ಮಕ್ಕಳ ಭವಿಷ್ಯವು ಬಾಲ್ಯಾವಸ್ಥೆಯಿಂದಲೇ ಆಶಾದಾಯಕವಾಗಿರಲು ಬುನಾದಿ ಹಾಕುವುದಾಗಿದೆ.

ಉದ್ದೇಶ:

  1. ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒಗಿಸಲು ಬೇಕಾದ ಸಾಂಸ್ಥಿಕ ಮತ್ತು ಆರ್ಥಿಕ ನೆರವನ್ನು ಒದಗಿಸುವುದದಾಗಿದೆ.
  2. ಮಹಿಳೆಯರ ಮತ್ತು ಮಕ್ಕಳ ಆರೋಗ್ಯ, ಪೌಷ್ಠಿಕತೆ ಹಾಗೂ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಲು ಇತರೆ ಸಹ ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿದೆ.
  3. ಮಹಿಳೇಯರಲ್ಲಿ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣ, ಸಾಮಾಜಿಕ ಶಾಸನಗಳು, ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ. ಈ ಮೂಲಕ ಮಹಿಳೆಯರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಸಬಲೀಕರಣಗೊಳಿಸುವುದಾಗಿದೆ.
  4. ಮಕ್ಕಳು ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇನ್ನಿತೆ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದು ಸೇರಿದಂತೆ ಅವರ ಹಕ್ಕುಗಳನ್ನು ಸಂರಕ್ಷಿಸಿ ಅವರು ಬದುಕುಳಿದು ಅಭಿವೃದ್ಧಿಹೊಂದಲು ಪೂರಕವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದೆ.
  5. ಮಹಿಳೆಯರು ಮತ್ತು ಮಕ್ಕಳು ಸಮಾಜದಲ್ಲಿ ನ್ಯಾಯಬದ್ಧವಾಗಿ ಸಮಾನತೆಯನ್ನು ಹೊಂದಲು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪಿಸಿರುವ ಕಾಯ್ದೆಗಳು ಮತ್ತು ಅಧಿನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ವಿವಿಧ ಶೋಷಣೆಗಳಿಂದ ರಕ್ಷಿಸಿ ಸಂಕಷ್ಟ ಪರಿಸ್ಥಿತಿಯಿಂದ ಹೊರತರುವುದಾಗಿ.
  6. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇರುವ ಕಾಯ್ದೆಗಳನ್ನು, ಕಾರ್ಯ ನೀತಿಗಳನ್ನು, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಹಾಗೂ ನಿರ್ದಿಷ್ಟ ಗುರಿಗಳನ್ನು ತಲುಪಲು ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾತೇತರ ಹಾಗೂ ಕಾರ್ಪೋರೇಟ್ ವಲಯಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದಾಗಿದೆ.
  7. 0-6 ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬುನಾದಿ ಹಾಕುವುದಲ್ಲದೆ, ಪೂರಕ ಪೌಷ್ಠಿಕ ಆಹಾರ, ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ, ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕತೆಯ ಬಗ್ಗೆ ತಾಯಂದಿರಿಗೆ ತರಬೇತಿ ಹಾಗೂ ಅರಿವು ಮೂಡಿಸುವುದರ ಬಗ್ಗೆ ಒತ್ತು ನೀಡುವುದು.
  8. 11-18 ವರ್ಷದ ಪ್ರಾಯ ಪೂರ್ವ ಬಾಲಕಿಯರ ಸಬಲೀಕರಣಕ್ಕಾಗಿ ಆರೋಗ್ಯ, ಪೌಷ್ಠಿಕತೆ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು.
  9. ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಹಾಗೂ ಕಾನೂನಿನೊಂಧಿಗೆ ಸಂಘರ್ಷದಲ್ಲಿರುವ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸುರಕ್ಷಿತವಾದ ವಾತಾವರಣವನ್ನು ಕಲ್ಪಿಸುವುದು.
  10. ಬಾಲ್ಯ ವಿವಾಹವನ್ನು ತಡೆಗಟ್ಟಲು ಹಾಗೂ ಬಾಲ್ಯ ವಿವಾಹದಿಂದ ಆಗುವ ಪರಿಣಾಮದ ಬಗ್ಗೆ ಅರಿವು ಮೂಡಿಸಲು, ಹೆಣ್ಣು ಮಗುವಿನ ವಿರುದ್ಧವಿರುವ ಪಕ್ಷಪಾತವನ್ನು ಹೋಗಲಾಡಿಸುವುದು, ಇಳಿಯುತ್ತಿರುವ ಲಿಂಗ ಪ್ರಮಾಣವನ್ನು ಸರಿಪಡಿಸುವುದು ಹಾಗೂ ಸಾಮಾಜಿಕ ಪಿಡುಗುಗಳ ನಿರ್ಮೂಲನೆ.
  11. ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವುದು.
  12. ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣ
  13. ಕೌಟುಂಬಿಕ/ಸಾಮಾಜಿಕ ಬೆಂಬಲವಿಲ್ಲದ, ಪ್ರತ್ಯೇಕ ಆದಾಯವಿಲ್ಲದ, ಖಂಡನೆಗಳಿಗೆ ಅವಕಾಶವೀಯುವಂತಹ ಮಹಿಳೆಯರಿಗೆ ನೆರವು ಹಾಗೂ ಪುನರ್ವಸತಿ ಕಲ್ಪಿಸುವುದು.
  14. ಮಹಿಳಾ ಉದ್ದೇಶಿತ ಆಯವ್ಯಯವನ್ನು ನಿಗದಿಪಡಿಸುವ ಮೂಲಕ ಮಹಿಳೆಯರ ಪರ ನೀತಿ/ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಲಿಂಗತ್ವ ಸಮಾನತೆಯನ್ನು ಪಡೆಯುವುದು.
  15. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣವನ್ನು ನಿಶ್ಚಯಪಡಿಸುವುದು.
  16. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜಾಲದ ಮೂಲಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬೆಂಬಲಿಸುವ ಸೇವೆಗಳನ್ನು ಒದಗಿಸುವುದು.
  17. ದುಡಿಯುವ ಮಹಿಳೆಯರ ಮಕ್ಕಳಿಗಾಗಿ ರಾಜೀವ್ ಗಾಂಧಿ ಶಿಶುಪಾಲನಾ ಕೇಂದ್ರ ಯೋಜನೆಯ ಅನುಷ್ಠಾನ ಹಾಗೂ ತಿದ್ದುಪಡಿ
  18. ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರ ಆಕ ಸಬಲೀಕರಣ ಯೋಜನೆಗಳನ್ನು ಅನುಷ್ಟಾನಗೊಳಿಸುವುದು.
  19. ಮಹಿಳಾ ಆಯೋಗದ ಮೂಲಕ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಹಿಳೆಯರನ್ನು ಸಬಲೀಕರಿಸುವುದು.
  20. ಬಾಲ ವಿಕಾಸ ಅಕಾಡೆಮಿ ಹಾಗೂ ಬಾಲಭವನಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರಹೊಮ್ಮಲು ಕ್ರಿಯಾತ್ಮಕ, ಸೃಜನಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವುದು.
  21. ಅತಿಯಾದ ಬಡತನ ಮತ್ತು ಹಸಿವೆಯನ್ನು ನಿರ್ಮೂಲನೆಗೊಳಿಸುವುದು.
  22. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸುವುದು
  23. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು.
  24. ಮಕ್ಕಳ ಮರಣವನ್ನು ತಗ್ಗಿಸುವುದು.
  25. ತಾಯಿಯ ಆರೋಗ್ಯವನ್ನು ಸುಧಾರಿಸುವುದು.
  26. ಹೆಚ್.ಐ.ವಿ/ಏಡ್ಸ್, ಮಲೇರಿಯಾ ಮತ್ತು ಇತರೆ ರೋಗಗಳ ವಿರುದ್ಧ ಪ್ರತಿಭಟಿಸುವುದು.
  27. ಪರಿಸರವನ್ನು ಸಂರಕ್ಷಿಸುವುದು.
  28. ಅಭಿವೃದ್ಧಿಗಾಗಿ ವಿಶ್ವ ಸಹಭಾಗಿತ್ವವನ್ನು ಕಲ್ಪಿಸುವುದು.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ:ಈ ಪುಟವು ಸರ್ಕಾರಿ ಸಚಿವಾಲಯ/ಇಲಾಖೆ/ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ ಈ ವೆಚ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವೆಬ್ ಸೈಟ್ ವಿಳಾಸ
ಕ್ರ.ಸಂ ವಿಳಾಸ
1 www.karnataka.gov.in
2 dwcd.karnataka.gov.in
3 karunadu.karnataka.gov.in/welfareofdisabled
4 www.scd.karnataka.gov.in

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ಗೆ:

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಇಲಾಖೆಯು ಮಹಿಳೆಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಸಮಗ್ರವಾಗಿ ಮುಖ್ಯವಾಹಿನಿಗೆ ತರುವ ಮೂಲ ಉದ್ದೇಶವನ್ನು ಹೊಂದಿದೆ. ಮಹಿಳೆಯರ ಅಭಿವೃದ್ಧಿ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವುದಾಗಿ ಕಾರ್ಯಕ್ರಮಗಳು ಮಹಿಳೆಯರಿಗೆ ಶಿಕ್ಷಣ, ಅರಿವು ಮೂಡಿಸುವ ಮೂಲಕ ಸಶಕ್ತರನ್ನಾಗಿ ಮಾಡುವುದು ಅದರಲ್ಲೂ ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆ ಒತ್ತುಕೊಡುವ ಮೂಲಕ ಮಹಿಳೆಯರಲ್ಲಿ ದುಡಿಮೆಯ ಶಕ್ತಿ ಮತ್ತು ಜೀವನಮಟ್ಟವನ್ನು ಹೆಚ್ಚಿಸುವುದು.

ಇಲಾಖೆಯು ಮಕ್ಕಳಿಗೆ ಅವರ ಮೂಲಭೂತ ಹಕ್ಕುಗಳಾದ ಉಳಿಯುವಿಕೆ, ರಕ್ಷಣೆ ಅಭಿವೃದ್ಧಿ ಹಾಗೂ ಸಂರ್ಪೂಣ ಭಾಗಿತ್ವವನ್ನು ಖಾತರಿಪಡಿಸುವಂತಹ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಕ್ಕಳು ಅವರ ವೈಯಕ್ತಿಕ ಬೆಳವಣಿಗೆ ಹಾಗೂ ಉತ್ತಮಜೀವನಕ್ಕೆ ಅವಶ್ಯವಾದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಇತರೆ ಆಯಾಮಗಳಲ್ಲಿ ಸಂರ್ಪೂಣವಾಗಿ ಭಾಗವಹಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆ ಮತ್ತು ಮಕ್ಕಳಿಗಾಗಿ ಜಾರಿಯಲ್ಲಿರುವ ಅನೇಕ ಯೋಜನೆ/ಸೇವೆಗಳನ್ನು ಒಗ್ಗೂಡಿಸಿ ನೀಡುವ ವ್ಯವಸ್ಥೆಯನ್ನು ಉತ್ತಮ ಪಡಿಸುವಲ್ಲಿ ಹೆಚ್ಚು ಒತ್ತುಕೊಡುತ್ತಿದೆ.

ಆಡಳಿತಾತ್ಮಕ ವ್ಯವಸ್ಥೆ:

ಜಿಲ್ಲಾ ಮಟ್ಟದಲ್ಲಿ: ಜಿಲ್ಲಾ ವಲಯ ಯೋಜನೆಗಳ ಅನುಷ್ಠಾನವನ್ನು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಉಪ ನಿರ್ದೇಶಕರುಗಳ ಮೂಲಕ ಮಾಡಲಾಗುತ್ತಿದೆ. ಇವರಿಗೆ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ನಿರೂಪಣಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳು ಸಹಕರಿಸುತ್ತಾರೆ.ರಾಜ್ಯ ವಲಯ ಯೋಜನೆಗಳನ್ನು ನೇರವಾಗಿ ಜಿಲ್ಲೆಯ ಉಪ ನಿರ್ದೇಶಕರುಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿನ ಆಡಳಿತದ ಕ್ರಮ

ತಾಲ್ಲೂಕು ಮಟ್ಟದಲ್ಲಿನ ಆಡಳಿತದ ಕ್ರಮ

ತಾಲ್ಲೂಕು ಮಟ್ಟದಲ್ಲಿ: ತಾಲ್ಲೂಕು ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಇತರೆ ಕಾರ್ಯಕ್ರಮಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅನುಷ್ಠಾನಗೊಳಿಸುತ್ತಿದ್ದಾರೆ. ಅವರಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಇತರೆ ಸಿಬ್ಬಂದಿಗಳು ಸಹಕರಿಸುತ್ತಾರೆ. ಗ್ರಾಮ/ವಾರ್ಡ್ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಹಕರಿಸುತ್ತಾರೆ.