Close

ರಾಜಕೀಯ ವ್ಯವಸ್ಥೆ

ಅಧ್ಯಕ್ಷರು ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ: ( ಸೆಕ್ಷನ್193 ಪುಟ ಸಂ.159)

ಅಧ್ಯಕ್ಷರು ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಪಂಚಾಯತಿಯ ಸಭೆಗಳನ್ನು ಕರೆಯತಕ್ಕದ್ದು, ಅಧ್ಯಕ್ಷತೆ ವಹಿಸತಕ್ಕದು ಮತ್ತು ಸಭೆಗಳನ್ನು ನಡೆಸತಕ್ಕದ್ದು.

ಅಧ್ಯಕ್ಷರು ಈ ಅಧಿನಿಯಮದ ಮೂಲಕ ಅಥವಾ ಅದರಡಿಯಲ್ಲಿ ವಿಧಿಸಿದ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು ಮತ್ತು ವಹಿಸಿಕೊಟ್ಟಿರುವ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು, ಅಥವಾ ಸರ್ಕಾರವು ಕಾಲಕಾಲಕ್ಕೆ ವಹಿಸಿಕೊಟ್ಟಿರುವ ಕಾರ್ಯಗಳನ್ನು ನೆರವೇರಿಸತಕ್ಕದ್ದು

ಜಿಲ್ಲಾ ಪಂಚಾಯತಿಯ ಹಣಕಾಸಿನ ವಿಷಯಗಳ ಹಾಗೂ ಕಾರ್ಯನಿರ್ವಾಹಣಾ ಆಡಳಿತ ಸಮಗ್ರ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ಜಿಲ್ಲಾ ಪಂಚಾಯತಿಯ ಆದೇಶ ಅಗತ್ಯವಿದೆ ಎಂದು ಅವರಿಗೆ ಕಂಡು ಬಂದ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಮಂಡಿಸತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ ಜಿಲ್ಲಾ ಪಂಚಾಯಿತಿಯ ದಾಖಲೆಗಳನ್ನು ತರಸಿಕೊಳ್ಳಬಹದು

ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪಗಳಿಂದ ತೊಂದರೆಗೊಳಗಾದವರಿಗಾಗಿ ತುರ್ತು ಪರಿಹಾರಗಳನ್ನು ಒದಗಿಸುವ ಉದ್ದೇಶಕ್ಕಾಗಿ ಒಂದು ವರ್ಷದಲ್ಲಿ ಒಟ್ಟು ಒಂದು ಲಕ್ಷ ರೂಪಾಯಿಗಳವರೆಗೆ ಮಂಜೂರಾತಿ ನೀಡುವ ಅಧಿಕಾರವನ್ನು ಹೊಂದಿರತಕ್ಕದ್ದು

ಉಪಾಧ್ಯಕ್ಷರು: ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ( ಸೆಕ್ಷನ್194 ಪುಟ ಸಂ.159)

ಅಧ್ಯಕ್ಷರು ರಜೆಯ ಮೇಲಿದ್ದು, ಗೈರುಹಾಜರಿಯಾಗಿದ್ದಾಗ, ಆಥವಾ ಕಾರ್ಯನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕಾರ್ಯಗಳನ್ನು ನಿರ್ವಹಿಸತಕ್ಕದ್ದು.

ಅಧ್ಯಕ್ಷರ ಗೈರುಹಾಜರಿಯಲ್ಲಿ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿಯಿದ್ದಲ್ಲಿ ಜಿಲ್ಲಾ ಪಂಚಾಯಿತಿಯ ಸಭೆಗಳ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.

ಸ್ಥಾಯಿ ಸಮಿತಿಗಳು: ( ಸೆಕ್ಷನ್186 ಪುಟ ಸಂ.154)

ಜಿಲ್ಲಾ ಪಂಚಾಯತಿಯಲ್ಲಿ ಈ ಕೆಳಕಂಡ ಸ್ಥಾಯಿಸಮಿತಿಗಳನ್ನು ಹೊಂದಿರತಕ್ಕದ್ದು.

  • ಸಾಮಾನ್ಯ ಸ್ಥಾಯಿ ಸಮಿತಿ
  • ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ
  • ಸಾಮಾಜಿಕ ನ್ಯಾಯ ಸಮಿತಿ
  • ಶಿಕ್ಷಣ ಮತ್ತು ಆರೋಗ್ಯ ಸಮಿತಿ
  • ಕೃಷಿ ಮತ್ತು ಕೈಗಾರಿಕಾ ಸಮಿತಿ
    1. ಸಾಮಾನ್ಯ ಸ್ಥಾಯಿ ಸಮಿತಿ: ( ಸೆಕ್ಷನ್187 ಪುಟ ಸಂ.155)

      ಸದರಿ ಸಮಿತಿಯ ಉಪಾಧ್ಯಕ್ಷರು, ಪದನಿಮಿತ್ತ ಸದಸ್ಯರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿಯು ಸಿಬ್ಬಂದಿ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ಮತ್ತು ಸಂಪರ್ಕ, ಕಟ್ಟಡಗಳು, ಗ್ರಾಮೀಣ ಗೃಹ ನಿರ್ಮಾಣ, ಗ್ರಾಮ ವಿಸ್ತರಣೆ, ಪ್ರಕೃತಿ ವಿಕೋಪಗಳಿಗಾಗಿ ಪರಿಹಾರ ಹಾಗೂ ಸಂಬಂಧಪಟ್ಟ ವಿಷಯಗಳ ಮತ್ತು ಉಳಿದ ಜಿಲ್ಲಾ ಸಂಕೀರ್ಣ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನೆರವೇರಿಸತಕ್ಕದ್ದು.

    2. ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ: ( ಪುಟ ಸಂ.156)

      • ಸದರಿ ಸಮಿತಿಯ ಅಧ್ಯಕ್ಷರು, ಪದನಿಮಿತ್ತ ಸದಸ್ಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯತಿಯ ಹಣಕಾಸು ಬಜೆಟ್ ರೂಪಿಸುವುದು, ಆದಾಯ ಹಚ್ಚಿಸುವುದಕ್ಕಾಗಿ ಪ್ರಸ್ತಾವನೆಗಳ ಪರಿಶೀಲನೆ ಮತ್ತು ಜಮೆ ಹಾಗೂ ಖರ್ಚುಗಳ ವಿವರ ಪತ್ರಗಳ ಪರಿಶೀಲನೆ ಜಿಲ್ಲಾ ಪಂಚಾಯಿತಿಯ ಹಣಕಾಸಿನ ಮೇಲೆ ಪ್ರಭಾರವನ್ನು ಬೀರುವ ಎಲ್ಲಾ ಪ್ರಸ್ತಾವನೆಗಳ ಪರ್ಯಾಲೋಚನೆ ಮತ್ತು ಜಿಲ್ಲಾ ಪಂಚಾಯಿತಿಯ ಅದಾಯ ಮತ್ತು ವೆಚ್ಚದ ಸಾಮಾನ್ಯ ಮೇಲ್ವಿಚಾರಣೆಗಳಿಗೆ ಸಂಬಂಧಪಟ್ಟಿರುತ್ತದೆ.

  • ಯೋಜನಾ ಅದ್ಯತೆಗಳು ಅಭಿವೃದ್ಧಿಗಳಿಗೆ ತಗಲುವ ವೆಚ್ಚಗಳನ್ನು ನಿಗದಿಪಡಿಸುವುದು ಸಂಬಂಧಪಟ್ಟ ಹಾರಿಜೆಂಟಲ್ ಮತ್ತು ವರ್ಟಿಕಲ್ ಲಿಂಕೇಜ್, ಸರ್ಕಾರವು ಕೊಟ್ಟ ಮಾರ್ಗದರ್ಶನಗಳನ್ನು ಕಾರ್ಯಗತ ಮಾಡುವುದು. ಯೋಜಿತ ಕಾರ್ಯಕ್ರಮಗಳ ನಿಯಮಿತ ಪುನರಾವಲೋಕನ ಮುಖ್ಯ ಕಾರ್ಯಕ್ರಮಗಳ ಮೌಲ್ಯ ನಿರ್ಣಯ ಮತ್ತು ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಪಟ್ಟಿರುತ್ತದೆ.

  • ಸಾಮಾಜಿಕ ನ್ಯಾಯ ಸಮಿತಿ (ಪುಟ ಸಂ.156)

    ಈ ಸಮಿತಿಯ ಸದಸ್ಯರು ತಮ್ಮಲ್ಲೆ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಇತರೆ ಹಿತಾಸಕ್ತಿಗಳ ಸಂವರ್ಧನೆ.ಸಾಮಾಜಿಕ ಅನ್ಯಾಯ ಹಾಗೂ ಎಲ್ಲ ರೀತಿಯ ಶೋಷಣೆಯಿಂದ ಅವರನ್ನು ಸಂರಕ್ಷಿಸುವುದು. ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಏಳಿಗೆ. ಅನುಸೂಚಿತ ಜಾತಿಗಳಿಗೆ ಅನುಸೂಚಿತ ಪಂಗಡಗಳಿಗೆ ಮಹಿಳೆಯರಿಗೆ ಮತ್ತು ಸಮಾಜದ ಇತರೆ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವುದು. ಇವುಗಳಿಗೆ ಸಂಬಂಧಪಟ್ಟಂತೆ ಕಾರ್ಯಗಳನ್ನು ನೆರವೇರಿಸತಕ್ಕದ್ದು.

  • ಶಿಕ್ಷಣ ಮತ್ತು ಆರೋಗ್ಯ ಸಮಿತಿ : ( ಪುಟ ಸಂ.156)

    ಈ ಸಮಿತಿಯು ತಮ್ಮ ಸದಸ್ಯರಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು. ಜಿಲ್ಲಾ ಪಂಚಾಯತಿಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಹೊಣೆಗಾರಿಕೆ ಹೊಂದಿರುವುದು. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಯೋಜನೆಗಳ ಚೌಕಟ್ಟಿನೊಳಗೆ ಜಿಲ್ಲೆಯಲ್ಲಿ ಶಿಕ್ಷಣ ಯೋಜನೆಯನ್ನು ಕೈಗೊಳ್ಳುವುದು. ಜಿಲ್ಲಾ ಪಂಚಾಯತಿಯ ಶೈಕ್ಷಣಿಕ ಚಟುವಟಿಕೆಗಳ ಸಮೀಕ್ಷೆ ಮತ್ತು ಮೌಲ್ಯ ನಿರ್ಣಯ ಮಾಡುವುದು. ಜಿಲ್ಲಾ ಪಂಚಾಯತಿಯು ತನಗೆ ವಹಿಸಿಕೊಡಬಹುದಾದ ಶಿಕ್ಷಣ, ವಯಸ್ಕರ ಸಾಕ್ಷರತೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಇತರೆ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು. ಆರೋಗ್ಯ ಸೇವೆಗಳ, ಆಸ್ಪತ್ರೆಗಳು, ನೀರು ಸರಬರಾಜು ಕುಟುಂಬ ಕಲ್ಯಾಣ ಮತ್ತು ಇತರೆ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನೆರವೇರಿಸತಕ್ಕದ್ದು.

  • ಕೃಷಿ ಮತ್ತು ಕೈಗಾರಿಕಾ ಸಮಿತಿ: ( ಪುಟ ಸಂ.157)

    ಈ ಸಮಿತಿಯು ತಮ್ಮ ಸದಸ್ಯರಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು

    • ಕೃಷಿ ಉತ್ಪಾದನೆ, ಪಶು ಸಂಗೋಪನೆ, ಸಹಕಾರ ಬದು ಕಟ್ಟುವುದು ಮತ್ತು ಭೂಮಿಯನ್ನು ಕೃಷಿ ಯೋಗ್ಯ ಮಾಡುವುದು.
    • ಗ್ರಾಮ ಹಾಗೂ ಗುಡಿ ಕೈಗಾರಿಕೆಗಳು
    • ಜಿಲ್ಲಾ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು