Close

ಶಕ್ತಿ ಯೋಜನೆ

ದಿನಾಂಕ : 11/06/2023 - |

ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕರ್ನಾಟಕ ರಸ್ತೆ ಸಾರಿಗೆ ನಗರ ಸಾರಿಗೆ ಸಂಸ್ಥೆ/ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ/ಕಲ್ಯಾಣ ಸಂಬಂಧ “ಶಕ್ತಿ ಯೋಜನೆಯನ್ನು ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣ

ಈ ಯೋಜನೆಯ ಮುಖ್ಯ ಅಂಶಗಳು ಈ ಕೆಳಕಂಡಂತಿವೆ:
1. ಉಚಿತ ಕರ್ನಾಟಕ ಪ್ರಯಾಣ ರಾಜ್ಯದ(Domicile of Karnataka) ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಮಾತ್ರ ಸೌಲಭ್ಯ ಅನ್ವಯಿಸುತ್ತದೆ. ಈ ಮಹಿಳಾ ಪ್ರಯಾಣಿಕರ ಪೈಕಿ 6 ವರ್ಷದಿಂದ 12 ಬಾಲಕಿಯರು ಮತ್ತು ಲಿಂಗತ ಅಲ್ಪಸಂಖ್ಯಾತರು ಸಹ ಒಳಗೊಂಡಿರುತ್ತಾರೆ.

2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ/ಸಾಮಾನ್ಯ ಮತ್ತು ವೇಗದೂತ (ತಡೆರಹಿತ ರಾಜ್ಯಾದ್ಯಂತಒಳಗೊಂಡಂತೆ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

3. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎ.ಸಿ. ಸ್ತ್ರೀಪರ್, ಎ.ಸಿ. ಸ್ತ್ರೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡೀಮ್ ಕ್ಲಾಸ್, ಅಂಬಾರಿ ಉತ್ಸವ್, ಫೈ ಬಸ್, ಇವಿ ಪ್ಲಸ್ ಸಾರಿಗೆಗಳಲ್ಲಿ ಸೌಲಭ್ಯವು ಅನ್ವಯಿಸುವುದಿಲ್ಲ.

4. ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರದ ಯಾವುದೇ ಮಿತಿ ಇರುವುದಿಲ್ಲ. ಈ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯವಾಗುತ್ತದೆ.

5. ಕೆಲವು ಆಯ್ದ ಅಂತರ ರಾಜ್ಯ ಪ್ರಯಾಣಿಸಲು ಹೊರತುಪಡಿಸಿ ಉಳಿದ ಅಂತರರಾಜ್ಯ ಸಾರಿಗೆಗಳಲ್ಲಿ ಮಹಿಳೆಯರು ಉಚಿತವಾಗಿ ಅವಕಾಶವಿರುವುದಿಲ್ಲ.

6. ಶಕ್ತಿ ಯೋಜನೆಯು ದೈನಿಕ ಪಾಸು, ಮಾಸಿಕ ಪಾಸು, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂಗುತ್ತಿಗೆ (chartered service), ಪ್ಯಾಕೇಜ್ ಮುಂತಾದ ಸೇವೆಗಳಿಗೆ ಅನ್ವಯಿಸುವುದಿಲ್ಲ.

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಲಿಂಗತ ಅಲ್ಪಸಂಖ್ಯಾತರು.
  • ಫಲಾನುಭವಿಗಳು ಕರ್ನಾಟಕದ ನಿವಾಸಿಯಾಗಿರಬೇಕು.
  • 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹುಡುಗಿಯರು ಸಹ ಉಚಿತ ಪ್ರಯಾಣ ಸೌಲಭ್ಯಗಳಿಗೆ ಅರ್ಹರು.
  • ಫಲಾನುಭವಿಗಳು ಪ್ರಯಾಣ ಮಾಡುವಾಗ ಮಾನ್ಯವಾದ ಫೋಟೋ ಗುರುತಿನ ಪುರಾವೆಯನ್ನು ಹೊಂದಿರಬೇಕು.

ಫಲಾನುಭವಿ:

ಮಹಿಳಾ ಪ್ರಯಾಣಿಕರ ಪೈಕಿ 6 ವರ್ಷದಿಂದ 12 ಬಾಲಕಿಯರು ಮತ್ತು ಲಿಂಗತ ಅಲ್ಪಸಂಖ್ಯಾತರು

ಪ್ರಯೋಜನಗಳು:

ಉಚಿತ ಪ್ರಯಾಣ

ಅರ್ಜಿ ಸಲ್ಲಿಸುವ ವಿಧಾನ

ಈ ಕೆಳಕಂಡ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ (Digilocker) ಮುಖಾಂತರ ಹಾಜರುಪಡಿಸಬೇಕಾಗಿರುತ್ತದೆ:
—————————————————————————————————————————————————-
– ಶಕ್ತಿ ಸ್ಮಾರ್ಟ್ ಕಾರ್ಡ್
– ಆಧಾರ್ ಕಾರ್ಡ್.
– ಮತದಾರರ ಗುರುತಿನ ಚೀಟಿ.
– ಚಾಲನಾ ಪರವಾನಗಿ.
– ಪಾಸ್‌ಪೋರ್ಟ್.
– ಸರ್ಕಾರ ನೀಡಿದ ಯಾವುದೇ ಇತರ ಫೋಟೋ ಗುರುತಿನ ಚೀಟಿ.

ಕುಂದುಕೊರತೆ ಪರಿಹಾರ ವ್ಯವಸ್ಥೆ:
————————————————-
ಶಕ್ತಿ ಯೋಜನೆಯ ಸಹಾಯವಾಣಿ ಸಂಖ್ಯೆ: 1902

ಕಚೇರಿ ವಿಳಾಸ:
—————————
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಸಾರಿಗೆ ಭವನ ಕೇಂದ್ರ ಕಚೇರಿಗಳು, ಕೆ.ಎಚ್. ​​ರಸ್ತೆ, ಶಾಂತಿನಗರ, ಬೆಂಗಳೂರು-560 027.

ದೂರವಾಣಿ: 080-22221321/25
ವೆಬ್‌ಸೈಟ್: ksrtc.karnataka.gov.in