ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ
ಸಾರ್ವಜನಿಕರಿಗೆ ಅಗತ್ಯವಿರುವ ಕಂದಾಯ ಇಲಾಕೆಯ ಹಲವು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ, ನೆಮ್ಮದಿ ಯೋಜನೆಯನ್ನು 2006 ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ 890 ನೆಮ್ಮದಿ ಕೇಂದ್ರಗಳಳನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಯಿತು. ಆದರೆ, ಖಾಸಗಿ ಪಾಲುದಾರರ ನಿಯಂತ್ರಣದ ಕೊರತೆಯೂ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ನೆಮ್ಮದಿ ಯೋಜನೆಯನ್ನು ಸರ್ಕಾರವು ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಇದರ ಮೂಲಕ ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಪಾರದರ್ಶಕ, ವಿಶ್ವಾಸರ್ಹ ಹಾಗೂ ಕೈಗೆಟಕುವ ವಿಧಾನದ ಮೂಲಕ ನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸರ್ಕಾರದ ಆದೇಶ ಅನ್ವಯ ದಿನಾಂಕ: 18.12.2012 ರಂದು ಪ್ರಾರಂಭಿಸಲಾಗಿದ್ದು, ಅದರಂತೆ, ಸದರಿ ಕೇಂದ್ರಗಳು ದಿನಾಂಕ: 25.12.2012 ರಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತತ, ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು 769 ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಮತ್ತು 122 ಹೆಚ್ಚುವರಿ ಮುಂಗಡ ಕಟ್ಟೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು ಒಟ್ಟಾರೆ ಯೋಜನೆಯ ಮೇಲ್ವಿಚಾರಣೆಯನ್ನು ಹೊಂದಿರುತ್ತಾರೆ. ಸದರಿ ಕೇಂದ್ರಗಳ ಪರಿಣಾಮಕಾರಿ ನಿರ್ವಹಣೆಗಾಗಿ ರಾಜ್ಯಮಟ್ಟದಲ್ಲಿ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯವನ್ನು ದಿನಾಂಕ: 26.12.2012 ರಿಂದ ಸೃಜಿಸಲಾಗಿರುತ್ತದೆ. ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ರವರನ್ನು ಯೋಜನೆಯ ನಿರ್ದೇಶಕರಾಗಿ ನೇಮಿಸಲಾಗಿದೆ. ನಿರ್ದೇಶನಾಲಯವು ರಾಜ್ಯ ಮಟ್ಟದಲ್ಲಿ ಯೋಜನೆಯ ಅನುಷ್ಟಾನಕ್ಕಾಗಿ ತಾಂತ್ರಿಕ ಮಾರ್ಗದರ್ಶನವನ್ನು ನೀಡುತ್ತಾ, ಮೇಲ್ವಿಚಾರಣೆ ಮಾಡುತ್ತದೆ.
ಭೇಟಿ : http://sevasindhu.karnataka.gov.in/
ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
ಡಿಸಿ ಕಚೇರಿ ಕಟ್ಟಡ
ಕಂದಾಯ ಭವನ ಕಾಂಪ್ಲೆಕ್ಸ್, ಕೆ.ಜಿ. ರಸ್ತೆ, ಬೆಂಗಳೂರು 560009 ಸ್ಥಳ : ಪೋರ್ಟಲ್ ಮೂಲಕ ಆನ್ಲೈನ್ ಸಲ್ಲಿಕೆ | ನಗರ : ಬೆಂಗಳೂರು ನಗರ | ಪಿನ್ ಕೋಡ್ : 560009