Close

ಇಸ್ಕಾನ್

ರಾಜಾಜಿನಗರದಲ್ಲಿರುವ ಈ ದೇವಾಲಯವು ಪ್ರಪಂಚದಲ್ಲಿ ಅತಿ ದೊಡ್ಡ ಹಾಗೂ ಹೆಸರುವಾಸಿಯಾದ ದೇವಸ್ಥಾನ. ಇಸ್ಕಾನ್ ಸಂಸ್ಥಾಪಕರಾದಂತಹ, ಆಚಾರ್ಯ ಶ್ರೀ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ಇಚ್ಛೆಯ ಮೇರೆಗೆ, ಮಾಜಿ ರಾಷ್ಟ್ರಪತಿಗಳಾದ ಶಂಕರ ದಯಾಶರ್ಮರವರಿಂದ ಲೋಕಾರ್ಪಣೆ ಮಾಡಲಾಯಿತು. ಆಧ್ಯಾತ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಜ್ಞಾನಕ್ಕಾಗಿ ಈ ದೇವಸ್ಥಾನವನ್ನು ಸ್ಥಾಪಿಸಲಾಯಿತು. ಈ ದೇವಸ್ಥಾನವು, ಹರೇ-ಕೃಷ್ಣ ಬೆಟ್ಟ ,ಕೃಷ್ಣ ಲೀಲಾ ಉದ್ಯಾನವನ/ವೈಕುಂಟ ಬೆಟ್ಟ,ವೈವಿಧ್ಯಮಯ ಹಬ್ಬಗಳು,ಸಮಾಜ ಸೇವ ಮುಂತಾದವುಗಳನ್ನು ಒಳಗೊಂಡಿದೆ. ಈ ದೇವಸ್ಥಾನವು 17 ಮೀಟರ್ ಎತ್ತರದ ಚಿನ್ನ ಲೇಪಿತ ಧ್ವಜಸ್ಥಂಭ ಮತ್ತು 8.5 ಮೀಟರ್ ಚಿನ್ನ ಲೇಪಿತ ಕಳಶ ಶಿಖರವನ್ನು ಹೊಂದಿದೆ. ದರ್ಶನ ಸಮಯದಲ್ಲಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ಪ್ರಸಾದವನ್ನು ವಿನಿಯೋಗಿಸಲಾಗುತ್ತದೆ.

ಸಂದರ್ಶನದ ಸಮಯ:

ಎಲ್ಲಾ ದಿನ ಮು೦ಜಾನೆ -4: 15 ರಿಂದ 5:00 ಗಂಟೆಗೆ              

ಸೋಮವಾರದಿಂದ ಶುಕ್ರವಾರ -7: 15 ರಿಂದ 1:00 ಕ್ಕೆ ಮತ್ತು 4:15 ರಿಂದ 8:15 ಕ್ಕೆ              

 ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳು: -7: 15 ರಿಂದ ಸಂಜೆ 8:15 ಕ್ಕೆ

ತಲುಪುವ ಬಗೆ :

ವಿಮಾನದಲ್ಲಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ-33 ಕಿಮೀ

ರೈಲಿನಿಂದ

ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ -6.9 ಕಿ.ಮೀ., ಯಶ್ವಂತಪುರ ರೈಲು ನಿಲ್ದಾಣದಿಂದ 2.2 ಕಿ.ಮೀ.

ರಸ್ತೆ ಮೂಲಕ

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) -7.4 ಕಿ.ಮೀ.