ಕಬ್ಬನ್ ಪಾರ್ಕ್
ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು ಪ್ರವೇಶಿಸಬಹುದು. ಮೊದಲಿಗೆ 100 ಎಕರೆ ವಿಸ್ತಿರ್ಣ ಹೊಂದಿದ್ದ ಈ ಪ್ರದೇಶವು ತದನಂತರ ಸುಮಾರು 300 ಎಕರೆವರೆಗೂ ಬೆಳೆಯಿತು. ವಿವಿಧ ವನಸ್ಪತಿಗಳ ಉಚ್ಛ ಸಂಗ್ರಹಣೆಯನ್ನು ಇಲ್ಲಿ ಕಾಣಬಹುದು. ಮೊದಲಿಗೆ ಇದಕ್ಕೆ ಮೇಡ್ ಪಾರ್ಕ್ ಎಂದು ಹೆಸರಿಸಲಾಗಿತ್ತು. ತದನಂತರ ಅಂದಿನ ಆಡಳಿತಗಾರರ ಬೆಳ್ಳಿ ಹಬ್ಬದ ಸ್ಮರಣಾರ್ಥವಾಗಿ ಇದಕ್ಕೆ ಶ್ರೀ ಚಾಮರಾಜೆಂದ್ರ ಪಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ನಿಯಂತ್ರಣದಲ್ಲಿರುವ ವಿವಿಧ ಸ್ಮಾರಕಗಳು, ಸುಂದರ ಸಸ್ಯರಾಶಿಗಳನ್ನು ಇಲ್ಲಿ ಕಾಣಬಹುದು.