Close

ಟಿಪ್ಪುವಿನ ಅರಮನೆ

ವರ್ಗ ಐತಿಹಾಸಿಕ
  • ಟಿಪ್ಪುವಿನ ಅರಮನೆ
  • ಟಿಪ್ಪುವಿನ-ಅರಮನೆ

ಈ ಪ್ಯಾಲೇಸ್‌ ಬೆಂಗಳೂರು ಕೋಟೆಯ ಆವರಣದಲ್ಲಿ 1781ರಲ್ಲಿ ನವಾಬ್‌ ಹೈದರ್‌ ಖಾನ್‌ನ ಕಾಲದಲ್ಲಿ ಪ್ರಾರಂಭಗೊಂಡು 1791 ರಲ್ಲಿ ಟಿಪ್ಪು ಸುಲ್ತಾನ್‌ನ ಕಾಲದಲ್ಲಿ ಪೂರ್ಣಗೊಂಡ ಈ ಅರಮನೆ ಮರ ಹಾಗೂ ಗಾರೆಕಚ್ಚಿನಿಂದ ನಿರ್ಮಾಣವಾಗಿದೆ. ಎರಡಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂಡೋ ಇಸ್ಲಾಮಿಕ್‌ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಲ್ಲಿನ ಪೀಠಗಳ ಮೇಲೆ ಮರದ ಕಂಬಗಳನ್ನು ಅಳವಡಿಸಲಾಗಿದ್ದು ಈ ಕಂಬಗಳ ನಡುವೆ ಇರುವ ಇಂಡೋ-ಇಸ್ಲಾಮಿಕ್‌ ಶೈಲಿಯ ಕಮಾನುಗಳು ಮನಸೂರೆಗೊಳ್ಳುತ್ತವೆ. ಹಾಗೂ ಇಡೀ ಮೊಗಸಾಲೆಗೆ ಮತ್ತಷ್ಟು ಮೆರುಗು ನೀಡಿವೆ. ಅರಮನೆಯ ಗೋಡೆಗಳು ವರ್ಣಚಿತ್ರಗಳಿಂದ ಆವೃತವಾಗಿದ್ದು ನೋಡಲು ಮನೋಹರವಾಗಿವೆ. ಮೇಲಂತಸ್ತಿಗೆ ಹೋಗಲು ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪಾವಟಿಕೆಗಳಿವೆ. ಸುಲ್ತಾನರು ನಡೆಸುತ್ತಿದ್ದ ದೈನಂದಿನ ದರ್ಬಾರದ ಕೋಣೆಯನ್ನು ನೋಡಬಹುದು. ಜೊತೆಗೆ ಅವರು ಬಳಸುತ್ತಿದ್ದ ಕತ್ತಿ, ಖಡ್ಗಗಳನ್ನೂ ಕಾಣಬಹುದಾಗಿದೆ. 

ಅರಮನೆಯ ಗೋಡೆಗೆ ಹೊಂದಿಕೊಂಡಿರುವ ಶಾಸನವೊಂದರಲ್ಲಿ ಈ ಅರಮನೆಯನ್ನು “ಸಂತೋಷದ ಆವಾಸ ಹಾಗೂ ಸ್ವರ್ಗದ ವೈರಿ’ ಎಂದು ಬಣ್ಣಿಸಲಾಗಿದೆ.

ಸಂದರ್ಶನದ ಸಮಯ:-

ಎಲ್ಲಾ ದಿನಗಳು 8:30 ರಿಂದ 5:30 ರವರೆಗೆ ತೆರೆದಿರುತ್ತದೆ

ತಲುಪುವ ಬಗೆ :

ವಿಮಾನದಲ್ಲಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 38 ಕಿ.ಮೀ.

ರೈಲಿನಿಂದ

ಬೆಂಗಳೂರು ನಗರ ರೈಲ್ವೇ ನಿಲ್ದಾಣದಿಂದ -3.3 ಕಿಮೀ

ರಸ್ತೆ ಮೂಲಕ

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) -2.5 ಕಿಮೀ