ಸಾಹಸ ಮತ್ತು ಚಟುವಟಿಕೆಗಳು
- ಬೆಂಗಳೂರಿನಲ್ಲಿ ಲಘು ವಿಮಾನ ಹಾರಾಟ: ಬೆಂಗಳೂರಿನಲ್ಲಿ ನೀವು ವಿಮಾನವನ್ನು ಹಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಯಾವುದೇ ಪರವಾನಗಿ ಅಗತ್ಯವಿಲ್ಲದೇ, ಜಕ್ಕೂರ್ ಏರೋಡ್ರೋಮ್‌ನಲ್ಲಿ ಇದು ಸಾಧ್ಯವಿದೆ. ಮೈಕ್ರೊಲೈಟ್ ವಿಮಾನಗಳು ಪೈಲಟ್ ಮತ್ತು ಒಬ್ಬ ವಿದ್ಯಾರ್ಥಿ / ಪ್ರಯಾಣಿಕರಿಗಾಗಿ ನಿರ್ಮಿಸಲಾದ ಸಣ್ಣ ಎರಡು ಆಸನಗಳ ವಿಮಾನಗಳಾಗಿವೆ. ಝೆನ್ ಏರ್ ಮತ್ತು ಎಕ್ಸ್ ಏರ್ ಬೆಂಗಳೂರಿನಲ್ಲಿ ವಿಮಾನಯಾನ ಕಂಪನಿಗಳು ಬಳಸುವ ಎರಡು ಜನಪ್ರಿಯ ಮೈಕ್ರೊಲೈಟ್ ಮಾದರಿಗಳಾಗಿವೆ. ಮೈಕ್ರೋ ಲೈಟ್ ಪ್ಲೇನ್ ಆಪರೇಟರ್‌ಗಳು ಮೋಜಿನ ಸವಾರಿಗಳನ್ನು ಆಯೋಜಿಸುತ್ತಾರೆ. ಮುಂಗಡ ಕಾಯ್ದಿರಿಸಿ ಪೈಲಟ್‌ನೊಂದಿಗೆ ಪ್ರಯಾಣಿಕರ ಸೈಟಿನಲ್ಲಿ ಕುಳಿತು ಸಣ್ಣ ಹಾರಾಟ ಮಾಡಬಹುದು. ಹಾರಾಟದ ಸಮಯದಲ್ಲಿ ಹಾರಾಟದ ಮೂಲಭೂತ ಅಂಶಗಳನ್ನು ಪ್ರಯಾಣಿಕರಿಗೆ ವಿವರಿಸಲಾಗುವುದು ಮತ್ತು ಪ್ರಯಾಣಿಕರು ಕೆಲ ನಿಮಿಷಗಳ ಕಾಲ ವಿಮಾನವನ್ನು ತಮ್ಮ ವಶಕ್ಕೆ ಪಡೆದು ದಿಕ್ಕು ಬದಲಿಸುವುದು, ಎತ್ತರವನ್ನು ಹೆಚ್ಚಿಸುವುದು / ಇಳಿಸುವುದು ಮುಂತಾದ ಕೆಲವು ಸರಳ ಚಾಲನೆಯನ್ನು ಮಾಡಿ ವಿಮಾನ ಚಲಾಯಿಸಿದ ವಿಶಿಷ್ಟ ಅನುಭವ ತಮ್ಮದಾಗಿಸಿಕೊಳ್ಳಬಹುದಾಗಿದೆ.
- ಎಟಿವಿ ಸವಾರಿ, ಸಾಹಸ: ಎಟಿವಿ ರೈಡ್, ಪೇಂಟ್‌ಬಾಲ್, ಗೋ-ಕಾರ್ಟಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳು ಸರ್ಜಾಪುರ ರಸ್ತೆ, ಯಶವಂತಪುರ ಮತ್ತು ಕನಕಪುರ ರಸ್ತೆಯಲ್ಲಿ ಲಭ್ಯವಿದೆ https://playarena.in/
- ಹೆಬ್ಬಾಳ ಸರೋವರದಲ್ಲಿ ಪಕ್ಷಿ ವೀಕ್ಷಣೆ: ಹೆಬ್ಬಾಳ ಸರೋವರದ ತಟದಲ್ಲಿ ವಾಯು ವಿಹಾರ ಬೆಂಗಳೂರಿಗರ ನೆಚ್ಚಿನ ಹವ್ಯಾಸವಾಗಿದೆ. ಹಲವು ಬಗೆಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.
- ಲುಂಬಿನಿ ಗಾರ್ಡನ್ಸ್: ಲುಂಬಿನಿ ಗಾರ್ಡನ್ಸ್ ಉತ್ತರ ಬೆಂಗಳೂರಿನ ವಾಟರ್ ಥೀಮ್ ಪಾರ್ಕ್ ಮತ್ತು ಮನರಂಜನಾ ಪ್ರದೇಶವಾಗಿದೆ. ಲುಂಬಿನಿ ಉದ್ಯಾನವು ನಾಗವಾರ ಸರೋವರದ ದಡದಲ್ಲಿದೆ. ದೋಣಿ ವಿಹಾರ, ಮನೋರಂಜನಾ ಸವಾರಿ ಮತ್ತು ನೀರಾಟ ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ.
- ಏರೋ ಇಂಡಿಯಾ: ವೈಮಾನಿಕ ಸಾಹಸ ಹಾರಾಟ, ಪ್ರದರ್ಶನ ಮತ್ತು ವ್ಯಾಪಾರ ಸಭೆಗಳು ಸೇರಿದಂತೆ ಯಲಹಂಕ ವಾಯುಪಡೆಯ ನೆಲೆಯಲ್ಲಿ ನಡೆದ ದ್ವೈವಾರ್ಷಿಕ ಕಾರ್ಯಕ್ರಮ.
- ಬ್ರೇಕ್ ಔಟ್ ಅನುಭವ: ಬೀಗ ಹಾಕಿದ ಕೊಠಡಿಯಿಂದ ತಪ್ಪಿಸಿಕೊಳ್ಳುವುದನ್ನು ಒಳಗೊಂಡ ಪರಿಕಲ್ಪನೆ ಆಟ. ಕೋರಮಂಗಲದಲ್ಲಿ ಲಭ್ಯವಿದೆ (https://breakout.in/)
- ಸ್ನೋ ಸಿಟಿ: ಜೆಸಿ ನಗರದಲ್ಲಿರುವ ಕೃತಕ ಒಳಾಂಗಣ ಹಿಮವನ್ನು ಆನಂದಿಸಬಹುದಾದ ಸ್ಥಳ https://snowcityblr.com/
- ಟಾಕ್ ಟು ಹ್ಯಾಂಡ್: ಲೇಸರ್ ಟ್ಯಾಗ್ ಯುದ್ಧ ಆಡಬಹುದಾದ ತಾಣ, ಜಯನಗರದಲ್ಲಿ ಲಭ್ಯವಿದೆ
- ಐಪ್ಲೇ: ವೈಟ್‌ಫೀಲ್ಡ್‌ನಲ್ಲಿ ಐಸ್ ಸ್ಕೇಟಿಂಗ್ ಮಾಡಬಹುದಾದ ತಾಣ.
- ಫ್ಲೈಟ್ 4 ಫ್ಯಾಂಟಸಿ: ಕುಳಿತಲ್ಲೇ ಕಂಪ್ಯೂಟರ್ ಪರದೆಯನ್ನು ನೋಡಿ ವಿಮಾನ ಚಾಲನೆ ಅನುಭವ ಪಡೆಯಬಹುದಾದ ಕೇಂದ್ರ. ಕೋರಮಂಗಲದ ಫೋರಂ ಮಾಲ್ ಒಳಗೆ ಲಭ್ಯವಿದೆ
- ಫನ್ ವರ್ಲ್ಡ್: ಬೆಂಗಳೂರು ಅರಮನೆಯ ಬಳಿಯ ಜೆ.ಸಿ.ನಗರದಲ್ಲಿ ಇರುವ ಅಮ್ಯೂಸ್‌ಮೆಂಟ್ ಪಾರ್ಕ್.
- ಗಾಲ್ಫ್: ಬೆಂಗಳೂರಿನಲ್ಲಿ ಹಲವು ಗಾಲ್ಫ್ ಮೈದಾನಗಳಿವೆ. ಲಲಿತ್ ಅಶೋಕ್ ಹೋಟೆಲ್ ಎದುರು ಕುಮಾರಕೃಪಾ ರಸ್ತೆಯಲ್ಲಿ ಬೆಂಗಳೂರು ಗಾಲ್ಫ್ ಕ್ಲಬ್ ನಿರ್ವಹಿಸುವ ಗಾಲ್ಫ್ ಮೈದಾನ ಪ್ರಮುಖವಾದದ್ದಾಗಿದೆ.