Close

ಆಡಳಿತಾತ್ಮಕ ವ್ಯವಸ್ಥೆ

ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರಾಗಿದ್ದಾರೆ. ಈ ಕಚೇರಿಯ ಬೇರೆ ಭೇರೆ ವಿಭಾಗಗಳನ್ನು ಹೊಂದಿದ್ದು ಮತ್ತು ಪ್ರತಿಯೊಂದು ವಿಭಾಗಕ್ಕೆ ಶೀರಸ್ತೆದಾರರು ಅಥವಾ ವ್ಯವಸ್ಥಾಪಕರಿದ್ದು ಅವರು ಸಂಬಂಧ ಪಟ್ಟ ತಮ್ಮ ವಿಭಾಗದಲ್ಲಿ ಕೆಲಸದ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ನಿರ್ವಹಣೆಯನ್ನು ಜವಾಬ್ದಾರಿಯಿಂದಾ ನಿರ್ವಹಿಸುವರು. ವಿಭಾಗದ ಎಲ್ಲಾ ಕೆಲಸಗಳನ್ನು ಪ್ರಥಮ ದರ್ಜೇ ಸಹಾಯಕ ಮತ್ತು ದ್ವಿತೀಯ ದರ್ಜೇ ಸಹಾಯಕರಲ್ಲಿ ವಿಂಗಡಿಸಲಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿವಿಧ ಕಛೇರಿಗಳು ಇದ್ದು ಜಿಲ್ಲಾಧಿಕಾರಿಗಳಿಗೆ ಕಾರ್ಯನಿರ್ವಹಣೆಯಲ್ಲಿ ಸಹಕಾರಿಯಾಗುವವು. ಈ ವಿವಿಧ ಕಚೇರಿಗಳಾವವು ಎಂದರೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ, ಶಿರಸ್ತೇದಾರ, ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು.