ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ
ಮೈಸೂರಿನ ಪ್ರಾತ್ಯಾಂಡಳಿತ ಜಾರಿಯಲ್ಲಿದ್ದ 1944 ಸಂದರ್ಭದಲ್ಲಿ ಸಾಂಖ್ಯಿಕ ಇಲಾಖೆಯು ಸಂಸ್ಥಾಪಿಸಲ್ಪಟ್ಟಿತ್ತು. ಕಾಲಾನಂತರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯನುಸಾರ ಒಂದು ಇಲಾಖೆಯ ರೂಪವನ್ನು ಪಡೆಯಿತು. ಆರಂಭದಿಂದ 1954 ರ ವರೆಗೂ ಸಾಂಖ್ಯಿಕ ಇಲಾಖೆಯ ಆಡಳಿತ, ಕೃಷಿ ಇಲಾಖೆಯ ಅಧೀನದಲ್ಲಿತ್ತು. ಸರ್ಕಾರ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂಥ ಸಂದರ್ಭದಲ್ಲಿ ಸಾಂಖ್ಯಿಕ ಇಲಾಖೆಯು ಒಂದು ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಇಲಾಖೆಯ ರಚನಾತ್ಮಕ ಕಾರ್ಯಕ್ರಮಗಳ ವಿಸ್ತರಣೆಯನ್ನು ಮನಗಂಡ ಸರ್ಕಾರ, ಸರ್ಕಾರದ ಪ್ರಮುಖ ಅಂಗ ಸಂಸ್ಥೆಯನ್ನಾಗಿ ಗುರುತಿಸಿತು. ಈ ಇಲಾಖೆಯು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಂಖ್ಯಿಕ ಕಾರ್ಯಗಳು, ಸಾರ್ವಜನಿಕ ಆರೋಗ್ಯ ಮತ್ತು ಆಡಳಿತ ಮುಂತಾದವುಗಳನ್ನು ಪರಿಗಣಿಸಿ 1955 ರಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗೆ ಪ್ರತ್ಯೇಕ ಇಲಾಖಾ ಸ್ಥಾನಮಾನ ನೀಡಿ ಕೃಷಿ ಇಲಾಖೆಯಿಂದ ಬೇರ್ಪಡಿಸಲಾಯಿತು. ಪ್ರಸ್ತುತ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಗಳನ್ನು ಸ್ಥಾಪಿಸಲಾಯಿತು
ರಾಜ್ಯ ಸಾಂಖ್ಯಿಕ ವ್ಯವಸ್ಥೆಯ ಭಾಗವಾದ ಜಿಲ್ಲಾ ಸಂಖ್ಯಾ ಸಂಗ್ರಹಣಾ ಕಛೇರಿಯು, ಜಿಲ್ಲಾ ಮಟ್ಟದಲ್ಲಿ ಸಾಂಖ್ಯಿಕ ವ್ಯವಸ್ಥೆಯ ಅಭಿವೃದ್ಧಿ, ನಿಯಂತ್ರಣ ಮತ್ತು ಸರ್ಕಾರದ ಸೇವಾ ಪ್ರಕಾರ್ಯಗಳಲ್ಲಿ ಅತ್ಯವಶ್ಯಕ ಸಾಧನವಾಗುವಂತೆ ಮಾಡುವುದು. ಆ ಮೂಲಕ ಜಿಲ್ಲೆಯ ಒಳಗೂ ಹಾಗೂ ಹೊರಗೂ ಉಪಯೋಗಿಸುವ ಅಂಕಿ ಅಂಶಗಳಲ್ಲಿ ವಿಶ್ವಾಸಾರ್ಹತೆ, ಸಮಗ್ರತೆ/ ಪರಿಪೂರ್ಣತೆಯನ್ನು ಹೆಚ್ಚಿಸುವುದು ಮತ್ತು ನಿಗಧಿತ ಸಮಯದೊಳಗೆ ಒದಗಿಸುವ ಕಾರ್ಯಮಾಡುವುದಾಗಿದೆ.
- ನಾಗರೀಕ ನೋಂದಣಿ: ಜನನ-ಮರಣ ನೋಂದಣಿ ಅಧಿನಿಯಮ-1969 ಕಾಯ್ದೆಯನುಸಾರ ನಾಗರೀಕ ನೋಂದಣಿಯ ಕಾರ್ಯವನ್ನು ಪ್ರತ್ಯೇಕ ತಂತ್ರಾಂಶ ‘ಇ-ಜನ್ಮ’ವನ್ನು ಫೆಬ್ರವರಿ 2015 ರಿಂದ ಜಾರಿಗೊಳಿಸಿ ಸದರಿ ತಂತ್ರಾಂಶದ ಮೂಲಕವೇ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜನನ ಮರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿವೆ.
- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿಯಲ್ಲಿ ಬೆಳೆ ಕಟಾವು ಪ್ರಯೋಗವನ್ನು ಕೈಗೊಳ್ಳುವುದು. ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಪ್ರಕೃತಿ ವಿಕೋಪದಿಂದ ಹಾಗೂ ರೋಗರುಜಿನೆಗಳಿಂದ ಬೆಳೆ ನಷ್ಟಗೊಂಡಾಗ, ನಷ್ಟಗೊಂಡ ರೈತರಿಗೆ ವಿಮೆ ಹಣ ನೀಡುವುದಾಗಿದೆ. ಇದರ ಭಾಗವಾಗಿ ಗ್ರಾಮ ಪಂಚಾಯತಿವಾರು ಮತ್ತು ಹೋಬಳಿವಾರು ಬೆಳೆಗಳನ್ನು ವಿಭಾಗಿಸಿ, ಬೆಳೆ ಕಟಾವು ಪ್ರಯೋಗಗಳನ್ನು ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ತೋಟಗಾರಿಕಾ ಇಲಾಖೆಗಳಿಂದ ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.
- ಬೆಳೆಕ್ಷೇತ್ರ ಮರುಹೊಂದಾಣಿಕೆ ವರದಿ: ಗ್ರಾಮ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ ಬೆಳೆ ಪ್ರದೇಶವನ್ನು ಮರುಹೊಂದಾಣಿಕೆ ಮಾಡುವ ಸಲುವಾಗಿ 2005-06 ರಿಂದ ಬೆಳೆ ಕ್ಷೇತ್ರ ಮರುಹೊಂದಾಣಿಕೆ ಪದ್ದತಿಯು ಜಾರಿಯಲ್ಲಿದೆ. ಈ ಪದ್ಧತಿಯಲ್ಲಿ ಸಂಬಂಧಪಟ್ಟ ಇಲಾಖೆಗಳಾದ ಕಂದಾಯ ಕೃಷಿ, ತೋಟಗಾರಿಕಾ, ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ವರ್ಷದ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಋತುಗಳ ಬೆಳೆ ಕ್ಷೇತ್ರಗಳ ಮರುಹೊಂದಾಣಿಕೆ ಮಾಡಲಾಗುವುದು.
- ಪ್ರಕಟಣೆಗಳು: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದಾಗಿರುವ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಸರ್ಕಾರಕ್ಕೆ, ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ಒದಗಿಸುವ ಪ್ರಮುಖ ಅಂಗವಾಗಿದೆ. ಜಿಲ್ಲೆಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಉಪಯುಕ್ತ ಅಂಕಿ ಅಂಶಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಜಿಲ್ಲಾ ಅಂಕಿ ಅಂಶಗಳ ನೋಟ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅವಲೋಕನಗಳನ್ನು ಹಸ್ತ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತದೆ.
ಇಲಾಖೆಯ ಹೆಸರು ಮತ್ತು ವಿಳಾಸ
|
ಜಿಲ್ಲಾ ಸಂಖ್ಯಾಶಾಸ್ತ್ರೀಯ ಕಚೇರಿ, ಬೆಂಗಳೂರು ನಗರ ಜಿಲ್ಲೆ
ಸಂಖ್ಯೆ # 29, ಕರಿಯೊಬನಹಳ್ಳಿ, ಯಶ್ವಂತಪುರ ಹೊಬ್ಲಿ,
ಬೆಂಗಳೂರು ಉತ್ತರ ತಾಲ್ಲೂಕು,
ನಾಗಸಂದ್ರ ಪೋಸ್ಟ್, ಬೆಂಗಳೂರು -560073.
|
ಇಲಾಖೆಯ ಮುಖ್ಯಸ್ಥರ ಹೆಸರು ಮತ್ತು ಹುದ್ದೆ
|
ಶ್ರೀ ಮಧುರಾಮ್ ಎನ್.
ನಿರ್ದೇಶಕ, ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ನಿರ್ದೇಶನಾಲಯ.
ಶ್ರೀ ಕೆ.ಎಸ್. ರಮೇಶ್,
ಜಿಲ್ಲಾ ಸಂಖ್ಯಾಶಾಸ್ತ್ರೀಯ ಅಧಿಕಾರಿ, ಬೆಂಗಳೂರು ನಗರ ಜಿಲ್ಲೆ.
|
ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ
|
9480897040 |
ಇಮೇಲ್ ವಿಳಾಸ
|
dsodes.bangaloreurban@gmail.com |
ಇಲಾಖೆಯ ವೆಬ್‌ಸೈಟ್ ವಿಳಾಸ
|
https://des.karnataka.gov.in |
ಇಲಾಖೆಯ ಉದ್ದೇಶ, ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ
|
ತೀರ್ಮಾನ ಮಾಡುವಿಕೆ. ಮೇಲ್ವಿಚಾರಣಾ ವ್ಯವಸ್ಥಾಪಕ ಕಾರ್ಯಗಳು, ಸಂಶೋಧನಾ ಆಧಾರಿತ
ಕರ್ತವ್ಯಗಳು,ತರಬೇತಿ, ವಿಶ್ಲೇಷಣೆ,ಲೆಕ್ಕಾಚಾರ ಅಥವಾ ಸಂಖ್ಯಾಶಾಸ್ತ್ರೀಯ ನಿಯತಾಂಕಗಳ
ಅಂದಾಜು.
ಜನನ ಮತ್ತು ಮರಣ ಘಟಕಗಳ 647 ನೋಂದಣಿ (ನಾಗರಿಕ ನೋಂದಣಿ ವ್ಯವಸ್ಥೆಗಳು)
ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆಯನ್ನು ಪ್ರತಿವರ್ಷ ಯೋಜನೆಯ ಪ್ರಕಾರ ನಡೆಸಲಾಗುತ್ತದೆ.
ಹೊಬ್ಲಿ, ಪಂಚಾಯತ್ ಮತ್ತು ತಾಲ್ಲೂಕು ಮಟ್ಟದಿಂದ ಈ ಕೆಳಗಿನ ಅಂಕಿಅಂಶಗಳ ಸಂಗ್ರಹ.
ಅದನ್ನು ಬಲವಂತಪಡಿಸಿ ಮತ್ತು ಕ್ರೋಡಿಕರಿಸಿ ಮುಖ್ಯ ಕಚೇರಿಗೆ ಸಲ್ಲಿಸಿ ಅಂದರೆ ಅರ್ಥಶಾಸ್ತ್ರ
ಮತ್ತು ಅಂಕಿಅಂಶಗಳ
ನಿರ್ದೇಶನಾಲಯ.
|
ಪ್ರಮುಖ ಚಟುವಟಿಕೆಗಳು, ಯಾವುದೇ ಛಾಯಾಗೃಹಣ (5-6 ಸಂಖ್ಯೆ) ಆಡಿಯೊ ಫೈಲ್‌ಗಳು, ವೀಡಿಯೊ ಫೈಲ್‌ಗಳು ಮತ್ತು ಈವೆಂಟ್‌ನ ಅಗತ್ಯ ವಿವರಣೆಯ ಕುರಿತು ಸಂಕ್ಷಿಪ್ತ ಟಿಪ್ಪಣಿ ಇಮೇಲ್‌ನೊಂದಿಗೆ ಲಗತ್ತಿಸಬಹುದು. |
|
ಅನುಷ್ಠಾನ, ಇಲಾಖೆ ಯೋಜನೆಗಳು, ಅನುಷ್ಠಾನ ಸ್ಥಿತಿ ಇತ್ಯಾದಿಗಳ
ಇತ್ತೀಚಿನ ಮತ್ತು ನವೀಕೃತ ಮಾಹಿತಿ
|
ಸಮೀಕ್ಷೆಗಳು / ಜನಗಣತಿಯನ್ನು ಅನುಷ್ಠಾನಗೊಳಿಸುವುದು, ವಿನ್ಯಾಸಗೊಳಿಸುವುದು
|
ಇಲಾಖೆಯಿಂದ ಕುಂದುಕೊರತೆ ನಿವಾರಣಾ ಕಾರ್ಯವಿಧಾನ
|
ಎಲ್ಲಾ ಕುಂದುಕೊರತೆಗಳನ್ನು ಮುಖ್ಯ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ, ಅಂದರೆ, ಅರ್ಥಶಾಸ್ತ್ರ
ಮತ್ತು ಅಂಕಿಅಂಶಗಳ ನಿರ್ದೇಶನಾಲಯ
|
ನಾಗರಿಕರಿಂದ ಪ್ರತಿಕ್ರಿಯೆ- ಇಲಾಖೆಯಿಂದ ಒದಗಿಸಲಾದ ಯಾವುದೇ ಕಾರ್ಯವಿಧಾನ (ಎಸ್‌ಎಂಎಸ್, ಇ-ಮೇಲ್ ವಿಳಾಸ, ಸಾಫ್ಟ್‌ವೇರ್ ಇತ್ಯಾದಿ) |
ನಾಗರಿಕರಿಂದ ಅಂತಹ ಪ್ರತಿಕ್ರಿಯೆ ಇಲ್ಲ. |