ಹಬ್ಬಗಳು
- ಬೆಂಗಳೂರು ಕರಗ: ಬೆಂಗಳೂರು ಕರಗವು 9 ದಿನಗಳ ಕಾಲ ನಡೆಯುವ ಹಬ್ಬವಾಗಿದ್ದು, ಶಕ್ತಿ ದೇವಿಯ ಗೌರವಾರ್ಥವಾಗಿ ತಿಲಗ ಸಮುದಾಯದ ಸದಸ್ಯರು ಬೆಂಗಳೂರಿನಲ್ಲಿ ಆಚರಿಸುತ್ತಾರೆ. ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ರಾಕ್ಷಸ ತಿಮಿರಸುರನನ್ನು ಸೋಲಿಸಲು ಹಲವಾರು ವೀರ ಕುಮಾರರ ಸಣ್ಣ ಸೈನ್ಯವನ್ನು ರಚಿಸಿದಳು. ದ್ರೌಪದಿಯ ದೇಹಾಂತ್ಯದ ಸಮಯದಲ್ಲಿ ಈ ವೀರ ಕುಮಾರರು ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಬದಲಿಗೆ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಭೂಮಿಗೆ ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಭುವಿಗೆ ಮರಳಿದ್ದನ್ನು ಗುರುತಿಸಲು ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.
- ಕರ್ನಾಟಕ ರಾಜ್ಯೋತ್ಸವ: ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ನವೆಂಬರ್ 1 ರಂದು ‘ರಾಜ್ಯೋತ್ಸವ’ ದಿನವಾಗಿ ಆಚರಿಸಲಾಗುತ್ತದೆ. 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.
- ಬಸವನಗುಡಿ ಕಡಲೆ ಕಾಯಿ ಪರಿಷೆ:ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ
- ನಮ್ಮ ಬೆಂಗಳೂರು ಹಬ್ಬ: ಪ್ರತಿವರ್ಷ ಸುಮಾರು 10 ದಿನಗಳವರೆಗೆ ಆಚರಿಸಲಾಗುವ ಬೆಂಗಳೂರು ಹಬ್ಬ ಕಲೆ, ಸಂಗೀತ, ಪುಸ್ತಕಗಳು, ಸಂಸ್ಕೃತಿ ಮತ್ತು ಪಾಕ ಪದ್ಧತಿಗಳ ಆಚರಣೆಯಾಗಿದೆ.
- ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಸುಮಾರು ಒಂದು ವಾರ ನಡೆಯುತ್ತದೆ, ಸೃಜನಶೀಲ ಚಲನಚಿತ್ರ ತಯಾರಕರು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸುತ್ತದೆ. https://biffes.in/
- ರಾಮನವಮಿ ಸಂಗೀತೋತ್ಸವ: ಪ್ರತಿವರ್ಷ ಒಂದು ತಿಂಗಳ ಕಾಲ ನಡೆಯುವ ಶಾಸ್ತ್ರೀಯ ಸಂಗೀತೋತ್ಸವ, ರಸಿಕರನ್ನು ರಂಜಿಸುತ್ತದೆ ಮತ್ತು ನೂರಾರು ಗಾಯಕರು ಹಾಗೂ ಸಂಗೀತಗಾರರಿಗೆ ವೇದಿಕೆ ಒದಗಿಸುತ್ತದೆ http://www.ramanavami.org/
- ಲಾಲ್‌ಬಾಗ್ ಉತ್ಸವಗಳು : ಲಾಲ್‌ಬಾಗ್ ವರ್ಷಪೂರ್ತಿ ಫಲಪುಷ್ಪಪ್ರದರ್ಶನಗಳು, ಮಾವು / ಹಲಸು ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ…
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ…
ಪ್ರತಿವರ್ಷದಂತೆ ವರ್ಷ, ಕಾರ್ತೀಕ ಮಾಸದ ಕೊನೆಯ ಸೋಮವಾರ, ಸುಂಕೇನ ಹಳ್ಳಿ ಎಂದು ಕರೆಯಲಾಗುತ್ತಿದ್ದ, ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪಾರಿಕ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬಸವನಗುಡಿಯ ಬೃಹತ್ ದೇವಲಯದಲ್ಲಿ ವಿಶೇಷಪೂಜೆ…
ಕರಗ ಆಚರಣೆಯ ಮೂಲವನ್ನು ಹೇಳುವ ಒಂದು ಐತಿಹ್ಯ ಹೀಗಿದೆ: ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು…
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ…
ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ….
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ…
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು…