Close

ಬೆಂಗಳೂರು ನಗರ

ಕರ್ನಾಟಕ ರಾಜಧಾನಿ ಹಾಗೂ ಉದ್ಯಾನವನಗಳ ನಗರವೆಂದು ಪ್ರಸಿದ್ದವಾದ ಬೆಂಗಳೂರು ನಗರ ಜಿಲ್ಲೆಯು 1986ನೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದಿದೆ.ಈ ಜಿಲ್ಲೆಯು ರಾಜ್ಯದ ಆಗ್ನೇಯ ದಿಕ್ಕಿನಲ್ಲಿದೆ. ಈ ಜಿಲ್ಲೆಯು ಕರ್ನಾಟಕ ರಾಜ್ಯದ ನೀತಿ ನಿಯಮಗಳ ರಚನೆಯ ಕೇಂದ್ರವಾಗಿದೆ. ಜಿಲ್ಲೆಯ ಹಿತಕರವಾದ ಹವಾಮಾನವು ದೇಶದ ನಾನಾ ಭಾಗಗಳ ಜನರನ್ನು ಆಕರ್ಷಿಸಿದೆ. ಬೆಂಗಳೂರು ನಗರವು ಏಷ್ಯಾ ಖಂಡದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಕೇಂದ್ರ, ರಾಜ್ಯ ಹಾಗೂ ಖಾಸಗಿ ಕಾರ್ಖಾನೆಗಳು ನೆಲೆಗೊಂಡಿರುತ್ತದೆ. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಇತರೆ ವಿದ್ಯಾ ಸಂಸ್ಥೆಗಳು ಶ್ರಮಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕು ತಾಲ್ಲೂಕುಗಳಿದ್ದು, 2 ಉಪವಿಭಾಗಗಳ ಕಚೇರಿಗೆ ಒಳಪಟ್ಟಂತೆ , ಬೆಂಗಳೂರು ದಕ್ಷನ ತಾಲ್ಲೂಕಿನಲ್ಲಿ 4 ಹೋಬಳಿಗಳು, ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 3 ಹೋಬಳಿಗಳು, ಬೆಂಗಳೂರು ಉತ್ತರ ತಾಲ್ಲುಕಿನಲ್ಲಿ 6 ಹೋಬಳಿಗಳು ಮತ್ತು ಆನೇಕಲ್ ತಾಲ್ಲೂಕಿನಲ್ಲಿ 4 ಹೋಬಳಿಗಳನ್ನು ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ಬೆಂಗಳೂರು ಉತ್ರರ ತಾಲ್ಲೂಕನ್ನು ಬೆಂಗಳೂರಿನ ಯಲಹಂಕದ ಕೆಲವು ಕ್ಷೇತ್ರಗಳನ್ನು ಬೆಂಗಳೂರು ಉತ್ರ (ಅಪರ) ತಾಲ್ಲೂಕು ಎಂದು ವಿಂಗಡಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಜಿಲ್ಲೆಯ ಆಡಳಿತ ಕೇಂದ್ರವು ಬೆಂಗಳೂರು ನಗರವಾಗಿದ್ದು ಕರ್ನಾಟಕ ರಾಜ್ಯದ ರಾಜದಾನಿಯು ಈ ಜಿಲ್ಲೆಯ ವ್ಯಾಪ್ತಿಯಲ್ಲಿರುತ್ತದೆ