Close

ಕಲೆ ಮತ್ತು ಹಬ್ಬಗಳು

  • ಬೆಂಗಳೂರು ಕರಗ: ಬೆಂಗಳೂರು ಕರಗವು 9 ದಿನಗಳ ಕಾಲ ನಡೆಯುವ ಹಬ್ಬವಾಗಿದ್ದು, ಶಕ್ತಿ ದೇವಿಯ ಗೌರವಾರ್ಥವಾಗಿ ತಿಲಗ ಸಮುದಾಯದ ಸದಸ್ಯರು ಬೆಂಗಳೂರಿನಲ್ಲಿ ಆಚರಿಸುತ್ತಾರೆ. ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ರಾಕ್ಷಸ ತಿಮಿರಸುರನನ್ನು ಸೋಲಿಸಲು ಹಲವಾರು ವೀರ ಕುಮಾರರ ಸಣ್ಣ ಸೈನ್ಯವನ್ನು ರಚಿಸಿದಳು. ದ್ರೌಪದಿಯ ದೇಹಾಂತ್ಯದ ಸಮಯದಲ್ಲಿ ಈ ವೀರ ಕುಮಾರರು ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಬದಲಿಗೆ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಭೂಮಿಗೆ ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಭುವಿಗೆ ಮರಳಿದ್ದನ್ನು ಗುರುತಿಸಲು ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.
  • ಕರ್ನಾಟಕ ರಾಜ್ಯೋತ್ಸವ: ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ನವೆಂಬರ್ 1 ರಂದು ‘ರಾಜ್ಯೋತ್ಸವ’ ದಿನವಾಗಿ ಆಚರಿಸಲಾಗುತ್ತದೆ. 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.
  • ಬಸವನಗುಡಿ ಕಡಲೆ ಕಾಯಿ ಪರಿಷೆ:ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ
  • ನಮ್ಮ ಬೆಂಗಳೂರು ಹಬ್ಬ: ಪ್ರತಿವರ್ಷ ಸುಮಾರು 10 ದಿನಗಳವರೆಗೆ ಆಚರಿಸಲಾಗುವ ಬೆಂಗಳೂರು ಹಬ್ಬ ಕಲೆ, ಸಂಗೀತ, ಪುಸ್ತಕಗಳು, ಸಂಸ್ಕೃತಿ ಮತ್ತು ಪಾಕ ಪದ್ಧತಿಗಳ ಆಚರಣೆಯಾಗಿದೆ.
  • ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಸುಮಾರು ಒಂದು ವಾರ ನಡೆಯುತ್ತದೆ, ಸೃಜನಶೀಲ ಚಲನಚಿತ್ರ ತಯಾರಕರು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸುತ್ತದೆ. https://biffes.in/
  • ರಾಮನವಮಿ ಸಂಗೀತೋತ್ಸವ: ಪ್ರತಿವರ್ಷ ಒಂದು ತಿಂಗಳ ಕಾಲ ನಡೆಯುವ ಶಾಸ್ತ್ರೀಯ ಸಂಗೀತೋತ್ಸವ, ರಸಿಕರನ್ನು ರಂಜಿಸುತ್ತದೆ ಮತ್ತು ನೂರಾರು ಗಾಯಕರು ಹಾಗೂ ಸಂಗೀತಗಾರರಿಗೆ ವೇದಿಕೆ ಒದಗಿಸುತ್ತದೆ http://www.ramanavami.org/
  • ಲಾಲ್‌ಬಾಗ್ ಉತ್ಸವಗಳು : ಲಾಲ್‌ಬಾಗ್ ವರ್ಷಪೂರ್ತಿ ಫಲಪುಷ್ಪಪ್ರದರ್ಶನಗಳು, ಮಾವು / ಹಲಸು ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.