ಪಶುಸಂಗೋಪನೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು. ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ತನ್ನ ವಿವಿಧ ಸ್ತರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಇಲಾಖೆಯು ಈ ಕೆಳಕಂಡ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ:

 • ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯ ಸೇವಾ
 • ಜಾನುವಾರು ಅಭಿವೃದ್ಧಿ
 • ಜಾನುವಾರು ಹಾಗೂ ಎಮ್ಮೆ ಸಂವರ್ಧನೆಗಾಗಿ ರಾಷ್ಟ್ರೀಯ ಯೋಜನೆ (NPCBB)
 • ಕುಕ್ಕುಟ ಅಭಿವೃದ್ಧಿ
 • ಕುರಿ ಮತ್ತು ಉಣ್ಣೆ ಅಭಿವೃದ್ಧಿ
 • ಹೈನುಗಾರಿಕೆ ಅಭಿವೃದ್ಧಿ
 • ವರಾಹ ಅಭಿವೃದ್ಧಿ
 • ಮೇವು ಅಭಿವೃದ್ಧಿ
 • ಮೊಲ ಸಾಕಾಣಿಕೆ ಅಭಿವೃದ್ಧಿ
 • ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮ
 • ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಇತರೆ

ಸಂಪರ್ಕಿಸಿ:

ಡಾ. ಸಿ. ರಾಜಶೇಖರ್ ಉಪ ನಿರ್ದೇಶಕರು, ಬೆಂಗಳೂರು (ನ.)

ದೂರವಾಣಿ : 080-23418327

ಇ-ಮೇಲ್ : bnguddahvs@gmail[dot]com

ಸಹಾಯವಾಣಿ :  1800 425 0012 080 – 234 17 100 ಬೆಳಿಗ್ಗೆ 7  ರಿಂದ  ರಾತ್ರಿ 9