Close

ಗ್ರಾಮ ಪಂಚಾಯತಿಗಳ ಪಾತ್ರ

ಗ್ರಾಮ ಪಂಚಾಯತಿಯ ರಾಜಕೀಯ ವ್ಯವಸ್ಥೆ:

 

ಗ್ರಾಮ ಪಂಚಾಯತ್ ಪ್ರಕಾರ್ಯಗಳು:- ಅಧ್ಯಕ್ಷರು ಪ್ರಕಾರ್ಯಗಳು ಗ್ರಾಮ ಪಂಚಾಯತಿ ಅಧ್ಯಕ್ಷರುಗಳ ಪ್ರಕಾರ್ಯಗಳು ಕೆಳಕಂಡಂತಿರುತ್ತವೆ.

ಗ್ರಾಮ ಪಂಚಾಯತಿಯ ಸಭೆಗಳನ್ನು ಕರೆಯತಕ್ಕದ್ದು.

ಗ್ರಾಮ ಪಂಚಾಯತಿಯ ದಾಖಲೆಗಳನ್ನು ನೋಡುವ ಅವಕಾಶವಿರತಕ್ಕದ್ದು (ಮತ್ತು ದಾಖಲೆಗಳು ಮತ್ತು ಕಡತಗಳನ್ನು, ತರಿಸಬಹುದು ಮತ್ತು ಈ ಅಧಿನಿಯಮ, ನಿಯಮಗಳು ಮತ್ತು ಇತರೆ ಸ್ಥಾಯಿ ಆದೇಶಗಳ ಉಪಬಂಧಗಳಿಗನುಸಾರವಾಗಿ ಮತ್ತು ಆ ಬಗ್ಗೆ ಗ್ರಾಮ ಪಂಚಾಯಿತಿಯು ಜಾರಿಗೊಳಿಸಿದ ನಿರ್ಣಯವನ್ನು ಅನುಸರಿಸಿ ಅವುಗಳ ಮೇಲೆ ಆದೇಶಗಳನ್ನು ಹೊರಡಿಸಬಹುದು. ಪರಂತು, ಕಾರ್ಯದರ್ಶಿಯು ಅಥವಾ ಗ್ರಾಮ ಪಂಚಾಯಿತಿಯ ಇತರೆ ಯಾವೊಬ್ಬ ಅಧಿಕಾರಿಯು ಸ್ವತಂತ್ರವಾಗಿ ಶಾಸನಬದ್ಧ ಅಧಿಕಾರಗಳನ್ನು ಚಲಾಯಿಸುವುದಕ್ಕೆ ನೇರವಾಗಿ ಸಂಬಂಧಪಟ್ಟ ಕಡತಗಳು ಅಥವಾ ದಾಖಲೆಗಳನ್ನು ಅಧ್ಯಕ್ಷನು ತರಿಸಿಕೊಳ್ಳತಕ್ಕದ್ದಲ್ಲ)

ಗ್ರಾಮ ಪಂಚಾಯಿತಿಯ (ಕಾರ್ಯದರ್ಶಿಯೂ ಸೇರಿದಂತೆ) ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ನಡೆಸತಕ್ಕದ್ದು ಮತ್ತು ನಿಯಂತ್ರಣವನ್ನು ಹೊಂದಿರತಕ್ಕದ್ದು.

ಗ್ರಾಮ ಪಂಚಾಯಿತಿಯ ನಿಯಂತ್ರಣದಲ್ಲಿರುವ ಯಾವೊಬ್ಬ ಅಧಿಕಾರಿಯನ್ನು ಅಥವಾ ನೌಕರನನ್ನು ಅವನ ವಿರುದ್ಧ ಒಂದು ಶಿಸ್ತು ವ್ಯವಹರಣೆಯನ್ನು ಹೂಡಲು ಉದ್ದೇಶಿಸಲಾಗಿದ್ದರೆ ಅಥವಾ ಅದು ಇತ್ಯರ್ಥದಲ್ಲಿದ್ದರೆ ಅಥವಾ ಯಾವುದೇ ಕ್ರಿಮಿನಲ್ ಅಪರಾಧದ ಬಗ್ಗೆ ಅವರ ವಿರುದ್ಧದ ಒಂದು ಮೊಕದ್ದಮೆಯ ಸಂಬಂಧದಲ್ಲಿ ತನಿಖೆ ಅಥವಾ ಅಧಿ ವಿಚಾರಣೆ ನಡೆಯುತ್ತಿದ್ದರೆ ಅವನನ್ನು ಅಮಾನತ್ತಿನಲ್ಲಿ ಇಡಲು ಅಧಿಕಾರ ಹೊಂದಿರತಕ್ಕದ್ದು.

ಅಧ್ಯಕ್ಷನು, ಸಮಿತಿಯ ಅಥವಾ ಗ್ರಾಮ ಪಂಚಾಯಿತಿಯ ಮಂಜೂರಾತಿಯು ಅಗತ್ಯವಿರುವಂಥ ಯಾವುದೇ ಕಾಮಗಾರಿಯನ್ನು ತಕ್ಷಣವೇ ನಿರ್ವಹಿಸುವುದು ಅಥವಾ ಯಾವುದೇ ಕಾರ್ಯವನ್ನು ಮಾಡುವುದು ಸಾರ್ವಜನಿಕ ಹಿತದೃಷ್ಠಿಯಿಂದ ಅಗತ್ಯವೆಂದು ಅಭಿಪ್ರಾಯಪಟ್ಟರೆ ಆ ಉದ್ದೇಶಕ್ಕಾಗಿ ಇಪ್ಪತ್ನಾಲ್ಕು ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.

ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನು, ಅಧ್ಯಕ್ಷನು ರಜೆಯ ಮೇಲೆ ಹೋದ ಕಾರಣ ಗೈರು ಹಾಜರಿಯಾದಾಗ ಅಥವಾ ಕೆಲಸವನ್ನು ಮಾಡಲು ಅಸಮರ್ಥನಾದಾಗ ಅಧ್ಯಕ್ಷನ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕಾರ್ಯವನ್ನು ನೆರವೇರಿಸತಕ್ಕದ್ದು.

  • ಪ್ರತಿ ವರ್ಷ ಶೇಕಡಾ 10ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಗೃಹಗಳನ್ನು ಒದಗಿಸುವುದು ಮತ್ತು ಸಾಧ್ಯವಾದಷ್ಟು ಬೇಗನೆ ಎಲ್ಲಾ ಮನೆಗಳಿಗೂ ಈ ಸೌಲಭ್ಯವನ್ನು ಒದಗಿಸುವ ಗುರಿ ಸಾಧಿಸುವುದು.
  • ಪುರುಷರು ಮತ್ತು ಮಹಿಳೆಯರಿಗಾಗಿ ಸಾಕಷ್ಟು ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು. .
  • ಸಾಕಷ್ಟು ಸಂಪನ್ಮೂಲಗಳನ್ನು ಸೃಜಿಸಿ ತಾನೇ ಅಥವಾ ವಾರ್ಷಿಕ ಕರಾರಿನ ಮೂಲಕವಾಗಲಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ವಹಿಸುವುದು. .
  • ಈ ಅಧಿನಿಯಮದಡಿ ವಿಧಿಸಬಹುದಾದ ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ಮತ್ತು ವಸೂಲು ಮಾಡುವುದು. 
  • ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು. 
  • ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳನ್ನು ಸಾಧಿಸುವುದು. 
  • ಜನನ ಮತ್ತು ಮರಣಗಳ ತ್ವರಿತ ನೋಂದಣಿ ಮತ್ತು ಅದನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು.
  • ನೈರ್ಮಲ್ಯ ವ್ಯವಸ್ಥೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆಯನ್ನು ಒದಗಿಸುವುದು. 
  • ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳ ಮೇಲಿನ ಒತ್ತುವರಿಗಳನ್ನು ತೆಗೆದು ಹಾಕುವುದು. 
  • ಸಾಕಷ್ಟು ರಸ್ತೆ ದೀಪಗಳನ್ನು ಒದಗಿಸುವುದು ಮತ್ತು ವಿದ್ಯುತ್ ಶುಲ್ಕಗಳನ್ನು ನಿಯತವಾಗಿ ಸಂದಾಯ ಮಾಡುವುದು. 
  • ಅನೈರ್ಮಲ್ಯಕರ ಗುಂಡಿಗಳನ್ನು ತುಂಬಿಸುವುದು ಮತ್ತು ಅನಾರೋಗ್ಯಕರ ಪ್ರದೇಶಗಳನ್ನು ಆರೋಗ್ಯಕರವನ್ನಾಗಿ ಮಾಡುವುದು. 
  • ಹುಚ್ಚುನಾಯಿಗಳನ್ನು ಮತ್ತು ಮಾಲೀಕರಿಲ್ಲದ ನಾಯಿಗಳನ್ನು ಸಾಯಿಸುವುದು. 
  • ಅದರಲ್ಲಿ ನಿಹಿತವಾಗಿರುವ ಎಲ್ಲಾ ಸಮುದಾಯ ಆಸ್ತಿಗಳನ್ನು ನಿರ್ವಹಿಸುವುದು. 
  • ಜನಗಣತಿ, ಬೆಳೆ-ಗಣತಿ, ಜಾನುವಾರು-ಗಣತಿ, ನಿರುದ್ಯೋಗಿಗಳ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು. 
  • ನಿರುಪಯುಕ್ತ ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಸಿ ಹಾಕುವುದಕ್ಕೆ ವಾಸದ ಮನೆಗಳಿಂದ ದೂರದಲ್ಲಿರುವ ಜಾಗಗಳನ್ನು ಪ್ರತ್ಯೇಕವಾಗಿ ಗುರುತಿಸುವುದು. 
  • ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು. 

ಸ್ಥಾಯಿ ಸಮಿತಿಗಳು

  • ಪ್ರತಿಯೊಂದು ಗ್ರಾಮ ಪಂಚಾಯಿತಿಯು, ಚುನಾವಣೆಯ ಮೂಲಕ ಈ ಮುಂದಿನ ಸಮಿತಿಗಳನ್ನು ರಚಿಸತಕ್ಕದ್ದು.
  • ಕೃಷಿ ಉತ್ಪಾದನೆ, ಪಶು ಸಂಗೋಪನೆ ಮತ್ತು ಗ್ರಾಮಾಂತರ ಕೈಗಾರಿಕೆಗಳು ಮತ್ತು ಬಡತನ ನಿವಾರಣಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸಲು ಉತ್ಪಾದನಾ ಸಮಿತಿ: .
  • ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಮತ್ತು ಇತರ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಹಿತದೃಷ್ಠಿಗಳಿಗೆ ಉತ್ತೇಜನ ನೀಡುವುದಕ್ಕೆ. .
  • ಸಾಮಾಜಿಕ ಅನ್ಯಾಯ ಮತ್ತು ಯಾವುದೇ ರೀತಿಯ ಶೋಷಣೆಗಳಿಂದ ಅಂತಹ ಜಾತಿಗಳಿಗೆ ಮತ್ತು ವರ್ಗಗಳಿಗೆ ರಕ್ಷಣೆ ಕೊಡುವುದಕ್ಕೆ. .
  • ಮಹಿಳೆ ಮತ್ತು ಮಕ್ಕಳ ಕಲ್ಯಾಣಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸಲು ಸಾಮಾಜಿಕ ನ್ಯಾಯ ಸಮಿತಿ.
  • ಶಿಕ್ಷಣ ಸಾರ್ವಜನಿಕ ಅರೋಗ್ಯ, ಲೋಕೋಪಯೋಗಿ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮತ್ತು ಗ್ರಾಮ ಪಂಚಾಯತಿಯ ಇತರ ಕಾರ್ಯಗಳನ್ನು ನಿರ್ವಹಿಸಲು ಸೌಖರ್ಯಗಳ ಸಮಿತಿ.