Close

ಸೇವಾ ಸಿಂಧು

ಸೇವಾ ಸಿಂಧು ಬಗ್ಗೆ

ಕರ್ನಾಟಕ ಸರ್ಕಾರವು “ಸೇವಾ ಸಿಂಧು” ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುತ್ತಿದೆ. “ಸೇವಾ ಸಿಂಧು” ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು, ಸಮಗ್ರ ನಾಗರೀಕರ ಸೇವೆಗಳ ಕೇಂದ್ರಗಳಾದ ಬೆಂಗಳೂರು ಒನ್, ಸಿಎಸ್ ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳಿಗೆ ನೀಡಿರುತ್ತದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರದ ಸೇವೆಗಳು ನಗದು ರಹಿತ , ಕಾಗದ ರಹಿತ ವಿಧಾನವನ್ನು ಜಾರಿಗೊಳಿಸಲು ಈ ಯೋಜನೆಯ ,ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮ ಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ.

ಭೇಟಿ: https://sevasindhu.karnataka.gov.in/

ಬೆಂಗಳೂರು ಒನ್, ಸಿಎಸ್ ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರ

ಇಡಿಸಿಎಸ್ ನಿರ್ದೇಶನಾಲಯ #೧೩, ಸಿಆರ್ ಎನ್ ಛೇಂಬರ್, ಧನಲಕ್ಷ್ಮಿ ಬ್ಯಾಂಕ್ ಮೇಲೆ, ೨ನೇ ಮಹಡಿ, ಕಸ್ತೂರಬಾ ರಸ್ತೆ, ಬೆಂಗಳೂರು - 560001 ಸಮಯ : 9AM-6PM ಸೋಮವಾರ - ಶುಕ್ರವಾರ
ಸ್ಥಳ : ಬೆಂಗಳೂರು - 560001
ದೂರವಾಣಿ : 080-22230282 | ಮೊಬೈಲ್ : 080-22279954 | ಇಮೇಲ್ : sevasindhu[at]karnataka[dot]gov[dot]in